ADVERTISEMENT

ಡಿಜಿಟಲೀಕರಣದ ಬಗ್ಗೆ ಪ್ರಚಾರ ಮಾಡುವವರಿಗೆ ಸಾವಿನ ಲೆಕ್ಕ ಸಿಕ್ಕಿಲ್ಲ: ಅಖಿಲೇಶ್‌

ಪಿಟಿಐ
Published 11 ಫೆಬ್ರುವರಿ 2025, 11:19 IST
Last Updated 11 ಫೆಬ್ರುವರಿ 2025, 11:19 IST
   

ನವದೆಹಲಿ: ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಲೋಕಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್, ‘ಡಿಜಿಟಲೀಕರಣದ ಬಗ್ಗೆ ಸಾಕಷ್ಟು ಪ್ರಚಾರ ಮಾಡುವ ಸರ್ಕಾರ ಕಾಲ್ತುಳಿತದಲ್ಲಿ ಮಡಿದವರ ಅಂತಿಮ ಅಂಕಿ ಅಂಶಗಳನ್ನು ಕೊಡುತ್ತಿಲ್ಲವೇಕೆ?’ ಎಂದು ಕೇಳಿದರು.

‘ಇದೇ ಮೊದಲ ಬಾರಿಗೆ ಕುಂಭ ಮೇಳಕ್ಕೆ ಆಗಮಿಸಿರುವ ಭಕ್ತರು 300 ಕಿ.ಮೀ ದೂರದ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದಾರೆ... ಗಡಿಭಾಗಗಳನ್ನು ಮುಚ್ಚಲಾಗಿದೆ... ಸಂಚಾರ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಾಗದ ಸರ್ಕಾರದ ‘ವಿಕಸಿತ ಭಾರತ’ದ ಚಿತ್ರಣವಿದು. ಭೂಮಿ ಮೇಲಿನ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಸಾಧ್ಯವಾಗದಿದ್ದಾಗ ಚಂದ್ರನಲ್ಲಿಗೆ ಹೋಗುವುದರ ಅರ್ಥವೇನು?’ ಎಂದು ಕಿಡಿಕಾರಿದರು.

‘ಆ ಡ್ರೋನ್‌ಗಳು ಈಗ ಎಲ್ಲಿವೆ..... ಡಿಜಿಟಲೀಕರಣದ ಬಗ್ಗೆ ಜಾಹೀರಾತುಗಳ ಮೂಲಕ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ಅಷ್ಟಾದರೂ ಕಾಲ್ತುಳಿತದಲ್ಲಿ ಸತ್ತವರೆಷ್ಟು ಎಂದು ಹೇಳಲು ಅವರಿಗೆ ಸಾಧ್ಯವಾಗಲಿಲ್ಲ’ ಎಂದು ವ್ಯಂಗವಾಡಿದರು.

ADVERTISEMENT

‘ಉತ್ತರ ಪ್ರದೇಶದಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ, ಈ ಡಬಲ್‌ ಎಂಜಿನ್ ಸರ್ಕಾರ ತಪ್ಪುಗಳನ್ನು ಡಬಲ್‌ ಮಾಡುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.