ಅಗರ್ತಲಾ: ಜತೆಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳ ಪತಿಯ ಮೇಲೆ ಪತ್ನಿ ಆ್ಯಸಿಡ್ ಹಾಕಿದ ಪ್ರಕರಣ ತ್ರಿಪುರದ ಉತ್ತರ ಜಿಲ್ಲೆಯಲ್ಲಿ ನಡೆದಿದೆ.
ಆ್ಯಸಿಡ್ ದಾಳಿಗೆ ಒಳಗಾದ ಶಿಬಾಜಿ ದೆಬ್ಬರ್ಮ ಅವರಿಗೆ ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ರೈತರಾದ ಶಿಬಾಜಿ ದೇಬ್ಬರ್ಮಾ ಅವರು ತಮ್ಮ ಪತ್ನಿ ಸುತ್ರಾಮಿ ಜತೆ ಬೈಕ್‌ನಲ್ಲಿ ಚಾಂದ್‌ಪುರ ಕಡೆ ಬುಧವಾರ ಹೊರಟಿದ್ದರು. ಆಗ ಇದ್ದಕ್ಕಿದ್ದಂತೆ ಸುಮಿತ್ರಾ ತನ್ನ ಪತಿಯ ಮೇಲೆ ಆಸಿಡ್ ಸುರಿದಿದ್ದಾರೆ. ತೀವ್ರ ನೋವಿನಿಂದಾಗಿ ಪತಿ ಬೈಕ್ ನಿಲ್ಲಿಸಿದ್ದಾರೆ. ಸ್ಥಳೀಯರು ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸಿಧೈ ಪೊಲೀಸ್ ಠಾಣಾಧಿಕಾರಿ ಹಿಮಾದ್ರಿ ಸರ್ಕಾರ್ ಹೇಳಿದ್ದಾರೆ.
ದಾಂಪತ್ಯ ಕಲಹದಿಂದ ಈ ಘಟನೆ ನಡೆದಿದೆ. ಈವರೆಗೂ ಯಾರೂ ದೂರು ನೀಡಿಲ್ಲ. ಆದರೆ ಈ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.