ADVERTISEMENT

ಕೇರಳ: 2015ರಿಂದ 416 ಕಾಡಾನೆಗಳ ಸಾವು

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 21:33 IST
Last Updated 5 ಜೂನ್ 2020, 21:33 IST
ನೀರಿನಲ್ಲೇ ಸಾವನ್ನಪ್ಪಿದ್ದ ಕಾಡಾನೆ 
ನೀರಿನಲ್ಲೇ ಸಾವನ್ನಪ್ಪಿದ್ದ ಕಾಡಾನೆ    
""

ತಿರುವನಂತಪುರ: ಕೇರಳದಲ್ಲಿ 2015ರಿಂದ ಇಲ್ಲಿಯವರೆಗೂ 416 ಕಾಡಾನೆಗಳು ಸಾವನ್ನಪ್ಪಿದ್ದು, ಈ ಪೈಕಿ 24 ಕಾಡಾನೆಗಳುಸ್ಫೋಟಕಅಥವಾ ವಿಷಾಹಾರ ಸೇವನೆ, ವಿದ್ಯುತ್‌ ಬೇಲಿ ಸ್ಪರ್ಷಿಸಿ ಹೀಗೆ ಅಸ್ವಾಭಾವಿಕ ಕಾರಣಗಳಿಂದ ಮೃತಪಟ್ಟಿವೆ.

ಬೆಳೆ ಹಾನಿ ತಡೆಯಲು ಕಾಡುಪ್ರಾಣಿಗಳಿಗೆ ಹಣ್ಣುಗಳಲ್ಲಿ ವಿಷ, ಸ್ಫೋಟಕಗಳನ್ನು ತುಂಬಿಸಿ ಇಡುವುದು, ವಿದ್ಯುತ್‌ ಬೇಲಿ ಅಳವಡಿಕೆ ಮುಂತಾದ ಕ್ರೂರ ಕ್ರಮಗಳನ್ನು ಇತ್ತೀಚೆಗೆ ಪಾಲಕ್ಕಾಡ್‌ ಜಿಲ್ಲೆಯಲ್ಲಿ ನಡೆದ ಗರ್ಭಿಣಿ ಕಾಡಾನೆಯ ಹತ್ಯೆ ಪ್ರಕರಣ ಬೆಳಕಿಗೆ ತಂದಿದೆ.

ತಜ್ಞರ ಸಮಿತಿ ರಚನೆಯಾಗಿಲ್ಲ: ಎರ್ನಾಕುಳಂ ಜಿಲ್ಲೆಯಲ್ಲಿ ಆನೆಯೊಂದರ ಸಾವಿನ ಪ್ರಕರಣದಲ್ಲಿ, ಅಪಘಾತಕ್ಕೊಳಗಾದ ಅಥವಾ ಸ್ಫೋಟಕಗಳ ಸೇವನೆಯಿಂದ ಘಾಸಿಗೊಳಗಾದ ವನ್ಯಜೀವಿಗಳ ರಕ್ಷಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿಯನ್ನು ರಚಿಸಬೇಕು ಎಂದು 2014ರಲ್ಲೇ ಕೇರಳ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ ಇದನ್ನು ಇಲ್ಲಿಯವರೆಗೂ ಸರ್ಕಾರ ಅನುಷ್ಠಾನಕ್ಕೆ ತಂದಿಲ್ಲ.

ADVERTISEMENT

5,706 : 2017ರ ಆನೆ ಗಣತಿಯ ಮಾಹಿತಿಯಂತೆ ಕೇರಳದಲ್ಲಿರುವ ಕಾಡಾನೆಗಳು

ಅಸ್ವಾಭಾವಿಕ ಕಾರಣದಿಂದ ಮೃತಪಟ್ಟ ಆನೆಗಳು

2019: 10 (ಒಂದು ಬೇಟೆಯಲ್ಲಿ, ಆರು ವಿದ್ಯುತ್‌ ಬೇಲಿ ಸ್ಪರ್ಷಿಸಿ ಸಾವು)

2020: 3 (ಈ ಪೈಕಿ ಎರಡು ಘಟನೆಗಳಲ್ಲಿ ಸ್ಫೋಟಕಗಳ ಬಳಕೆ)

246:2019ರಲ್ಲಿ ಕೇರಳದಲ್ಲಿ ದಾಖಲಾದ ವನ್ಯಜೀವಿ ಹತ್ಯೆ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.