ADVERTISEMENT

ಸೆ.13ರೊಳಗೆ ಇ.ಡಿ ವಿಚಾರಣೆಗೆ ಹಾಜರಾಗುವೆ: ಅಭಿಷೇಕ್‌ ಬ್ಯಾನರ್ಜಿ

ಪಿಟಿಐ
Published 11 ಸೆಪ್ಟೆಂಬರ್ 2023, 14:14 IST
Last Updated 11 ಸೆಪ್ಟೆಂಬರ್ 2023, 14:14 IST
ಅಭಿಷೇಕ್‌ ಬ್ಯಾನರ್ಜಿ
ಅಭಿಷೇಕ್‌ ಬ್ಯಾನರ್ಜಿ    

ಕೋಲ್ಕತ್ತ : ಸೆ.13ರ ಒಳಗೆ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ತೃಣಮೂಲ್‌ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್‌ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.

ಭಾನುವಾರ ಎಕ್ಸ್‌ನಲ್ಲಿ (ಹಿಂದಿನ ಟ್ವೀಟರ್‌) ಪೋಸ್ಟ್‌ ಮಾಡಿರುವ ಅವರು, ಇಂಡಿಯಾ ಒಕ್ಕೂಟದ ಮೊದಲ ಸಮನ್ವಯ ಸಮಿತಿ ಸಭೆ 13ರಂದು ನವದೆಹಲಿಯಲ್ಲಿ ನಡೆಯಲಿದೆ. ಆದರೆ, ಇ.ಡಿ. ಸೆ.13ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ. ಪ್ರಧಾನಿ ಮೋದಿ ಅವರು ಉದ್ದೇಶಪೂವಕವಾಗಿ ಸಭೆಗೆ ಗೈರಾಗುವಂತೆ ಮಾಡಲು ಈ ರೀತಿ ಮಾಡಿದ್ದಾರೆ. ಆದರೆ, ವಿಚಾರಣೆಗೆ ಹಾಜರಾಗಿ ತನಿಖಾ ತಂಡಕ್ಕೆ ಸಹಕರಿಸುವೆ ಎಂದು ತಿಳಿಸಿದ್ದರು. ಆದರೆ, ಪಕ್ಷದ ಮೂಲಗಳ ಪ್ರಕಾರ ‘ಇಂಡಿಯಾ’ದ ಸಮಿತಿ ಸಭೆಗೆ ಅವರು ಗೈರು ಹಾಜರಾಗುವ ಸಾಧ್ಯತೆ ಇದೆ.

ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಲೀಪ್ಸ್‌ ಆ್ಯಂಡ್‌ ಬೌಂಡ್ಸ್‌ ಪ್ರೈ.ಲಿ.ನ ಮುಖ್ಯ ಕಾಯನಿರ್ಹಣಾಧಿಕಾರಿಯೂ ಆದ ಅಭಿಷೇಕ್‌ ಅವರ ಕಚೇರಿ ಮೇಲೆ ತನಿಖಾ ತಂಡವು ಇತ್ತೀಚೆಗೆ ಶೋಧ ನಡೆಸಿತ್ತು. ಇದಾದ ಕೆಲವು ದಿನಗಳ ಬಳಿಕ ಇ.ಡಿ. ಅಭಿಷೇಕ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಇದಲ್ಲದೆ ಗೋವುಗಳ ಕಳ್ಳ ಸಾಗಾಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಅವರಿಗೆ ತನಿಖಾ ತಂಡ ನೋಟಿಸ್‌ ಜಾರಿ ಮಾಡಿತ್ತು. ಮೇ ತಿಂಗಳಲ್ಲಿ ಹಗರಣವೊಂದಕ್ಕೆ ಸಂಬಂಧಿಸಿದಂತೆ ಸಿಬಿಐ 9 ತಾಸು ವಿಚಾರಣೆ ನಡೆಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.