ADVERTISEMENT

ವಿಶ್ವಸಂಸ್ಥೆ| ನಿವೃತ್ತಿಯಾಗುವ ಮುನ್ನ ನಮಸ್ತೆ ಎಂದ ಸೈಯದ್ ಅಕ್ಬರುದ್ದೀನ್ 

ಏಜೆನ್ಸೀಸ್
Published 30 ಏಪ್ರಿಲ್ 2020, 14:25 IST
Last Updated 30 ಏಪ್ರಿಲ್ 2020, 14:25 IST
ನಮಸ್ತೆ ಎಂದು ಹೇಳುತ್ತಿರುವ ಅಕ್ಬರುದ್ದೀನ್  (ಟ್ವಿಟರ್ ಚಿತ್ರ)
ನಮಸ್ತೆ ಎಂದು ಹೇಳುತ್ತಿರುವ ಅಕ್ಬರುದ್ದೀನ್ (ಟ್ವಿಟರ್ ಚಿತ್ರ)   

ನವದೆಹಲಿ: ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ತನ್ನ ವೃತ್ತಿ ಜೀವನದ ಕೊನೆಯ ದಿನ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರೊಂದಿಗೆ ವಿಡಿಯೊ ಸಂವಾದ ನಡೆಸಿ ನಮಸ್ತೆ ಎಂದಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಈವರೆಗೆ ಇದ್ದ ವಿಶೇಷ ಪ್ರಾತಿನಿಧ್ಯ ಹಿಂಪಡೆದ ನಿರ್ಧಾರದ ಬಗ್ಗೆ ಪಾಕಿಸ್ತಾನದ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ಅದಕ್ಕೆ ಖಡಕ್ ಉತ್ತರ ನೀಡಿದವರು ಅಕ್ಬರುದ್ದೀನ್. ಕಾಶ್ಮೀರದ ಸಮಸ್ಯೆ, 370ನೇ ವಿಧಿ ಹಿಂಪಡೆದ ನಿರ್ಧಾರ, ಭಯೋತ್ಪಾದನೆ ಅಥವಾ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿಷಯಗಳೇ ಇರಲಿ, ಸಹಜ ನಗುವಿನೊಂದಿಗೆ ಅಕ್ಬರುದ್ದೀನ್ ಈ ಎಲ್ಲ ಪ್ರಶ್ನೆಗಳನ್ನು ಲೀಲಾಜಾಲವಾಗಿ ಎದುರಿಸುತ್ತಿದ್ದರು.

ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‌ನ ನಾಯಕ ಪಾಕಿಸ್ತಾನ ಮೂಲದ ಮಸೂದ್ ‌ಅಜರ್‌ನ್ನು ಜಾಗತಿಕ ಭಯೋತ್ಪಾದಕನಾಗಿ ಘೋಷಿಸುವಾಗ ಭಾರತದ ಪ್ರಯತ್ನಗಳಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಚೀನಾ ನಿರಂತರ ಪ್ರಯತ್ನಗಳನ್ನು ಮಾಡಿದ್ದರೂ ಅಕ್ಬರುದ್ದೀನ್ ಅದನ್ನೆಲ್ಲ ಮೀರಿ ಯಶಸ್ವಿಯಾಗಿದ್ದರು.

ADVERTISEMENT

ಅಕ್ಬರುದ್ದೀನ್ ನಿವೃತ್ತಿ ನಂತರ ಟಿಎಸ್ ತಿರುಮೂರ್ತಿಯನ್ನು ವಿಶ್ವಸಂಸ್ಥೆಯ ಮುಂದಿನ ರಾಯಭಾರಿಯಾಗಿ ನೇಮಕ ಮಾಡಲಾಗಿದ್ದು, ಶೀಘ್ರದಲ್ಲೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅವರು ವಿದೇಶಾಂಗ ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.