ಸಾಂದರ್ಭಿಕ ಚಿತ್ರ
ತಿರುವನಂತಪುರ: ದಕ್ಷಿಣ ಕೇರಳದ ವೆಳ್ಳರಡ ಬಳಿ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ತನ್ನ ತಾಯಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಸಂತ್ರಸ್ತೆಯ ಕಿರಿಯ ಮಗ ಶುಕ್ರವಾರ ಬೆಳಿಗ್ಗೆ ಆಹಾರ ಕೊಡಲು ಹೋದಾಗ, ತಾಯಿಯ ಸುಟ್ಟ ದೇಹವನ್ನು ಕಂಡಿದ್ದಾರೆ. ಆವರೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಸಂತ್ರಸ್ತೆಯ ಹಿರಿಯ ಮಗನನ್ನು ಬಂಧಿಸಲಾಗಿದ್ದು, ಆತನ ಹೇಳಿಕೆ ಪಡೆಯಬೇಕಿದೆ ಎಂದು ವೆಳ್ಳರಡ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.