ADVERTISEMENT

12 ನೇ ಮಹಡಿಯಿಂದ ಮಗುವಿನೊಂದಿಗೆ ಜಿಗಿದು ಮಹಿಳೆ ಆತ್ಮಹತ್ಯೆ: ಕಾರಣ ಕೇಳಿದರೆ ಕನಿಕರ

ಮುಂಬೈನ ಚಂಡಿವಾಲಿಯಲ್ಲಿ ಘಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2021, 9:42 IST
Last Updated 23 ಜೂನ್ 2021, 9:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಪಕ್ಕದ ಮನೆಯವರ ಕಾಟಕ್ಕೆ ಬೇಸತ್ತು ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ಅಪಾರ್ಟ್‌ಮೆಂಟ್‌ನ 12 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಚಂಡಿವಾಲಿಯಲ್ಲಿ ಮಂಗಳವಾರ ನಡೆದಿದೆ.

ರೇಷ್ಮಾ ತ್ರೆಂಚಿಲ್ (44) ಎಂಬ ಮಹಿಳೆ ಹಾಗೂ ಆರು ವರ್ಷದ ಮಗು ಮೃತರಾಗಿದ್ದಾರೆ.

‘ಮಗು ಜೋರಾಗಿ ಅಳುತ್ತೆ, ಇದರಿಂದ ನಮಗೆ ಕಿರಿಕಿರಿ ಆಗುತ್ತೆ ಎಂದು ಪದೇ ಪದೇ ಅಕ್ಕ–ಪಕ್ಕದ ಮನೆಯವರು ನಮಗೆ ಕಿರುಕುಳ ಕೊಡುತ್ತಿದ್ದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ‘ ಎಂದು ರೇಷ್ಮಾ ಡೆತ್‌ನೋಟ್ ಬರೆದಿಟ್ಟಿದ್ದಾರೆ.

ADVERTISEMENT

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರೇಷ್ಮಾ ಪಕ್ಕದ ಮನೆಯ 33 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.ಕಳೆದ ಮೇ ನಲ್ಲಿ ರೇಷ್ಮಾ ಅವರ ಗಂಡ ಶರತ್ ಮುಳಕುತ್ಲಾ ಅವರು ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.