ADVERTISEMENT

ಕೇದಾರನಾಥ ರಸ್ತೆಯಲ್ಲಿ ಭೂಕುಸಿತ: ಮಹಿಳೆ ಸಾವು, 5 ಮಂದಿಗೆ ಗಾಯ

ಪಿಟಿಐ
Published 30 ಜೂನ್ 2022, 2:12 IST
Last Updated 30 ಜೂನ್ 2022, 2:12 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಡೆಹರಾಡೂನ್: ಉತ್ತರಾಖಂಡದ ಕೇದರನಾಥ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ ಮಣ್ಣು ಮತ್ತು ಬಂಡೆಗಳು ವಾಹನದ ಮೇಲೆ ಬಿದ್ದಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

ಮಹಾರಾಷ್ಟ್ರದ ಅಹಮದ್‌ನಗರದ 62 ವರ್ಷದ ಪುಷ್ಪಾ ಮೋಹನ್ ಬೋಂಸ್ಲೆ ಮೃತ ಮಹಿಳೆ.

ರುದ್ರ ಪ್ರಯಾಗ್–ಗೌರಿ ಕುಂಡ್ ರಾಷ್ಟ್ರೀಯ ಹೆದ್ದಾರಿಯ ಸೋನ್ ಪ್ರಯಾಗ್ ಬಳಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ರುದ್ರ ಪ್ರಯಾಗ್ ಜಿಲ್ಲೆಯ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜವರ್ ತಿಳಿಸಿದ್ದಾರೆ.

ADVERTISEMENT

ಅಪಘಾತ ಸಂಭವಿಸಿದ ವಾಹನ ಕೇದರನಾಥದಿಂದ ಹಿಂದಿರುಗುತ್ತಿತ್ತು. ವಾಹನದಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು.

ವಾಹನವು ಸೋನ್‌ ಪ್ರಯಾಗ್-ಗೌರಿಕುಂಡ್ ಶಟಲ್ ಸೇವೆಯಲ್ಲಿ ತೊಡಗಿತ್ತು. ಮುಂಕಾಟಿಯ ಬಳಿ ಗುಡ್ಡದಿಂದ ಇದ್ದಕ್ಕಿದ್ದಂತೆ ಕೆಳಗೆ ಬಿದ್ದ ಬೃಹತ್ ಬಂಡೆಗಳು ಮತ್ತು ಮಣ್ಣು ವಾಹನದ ಮೇಲೆ ಬಿದ್ದಿದೆ ಎಂದು ಅವರು ಹೇಳಿದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ರಾಜವರ್ ಹೇಳಿದರು.

ಉತ್ತರಾಖಂಡದಲ್ಲಿ ಬುಧವಾರ ಮಳೆ ಸುರಿದಿದ್ದು, ರಾಜ್ಯದ ಹಲವೆಡೆ ಭೂಕುಸಿತ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.