ADVERTISEMENT

ಗಂಡನ ಜೊತೆ ಜಗಳ: ಮಗು ಕೊಂದು ಮೃತದೇಹದ ಜೊತೆ 4 ಕಿ.ಮೀ ಅಲೆದಾಡಿದ ಮಹಿಳೆ

ಪಿಟಿಐ
Published 22 ಮೇ 2024, 6:50 IST
Last Updated 22 ಮೇ 2024, 6:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನಾಗ್ಪುರ: ಮಹಿಳೆಯೊಬ್ಬರು ಗಂಡನ ಜೊತೆಗಿನ ಜಗಳದಲ್ಲಿ ಮಗುವನ್ನು ಕೊಂದು, ಮೃತದೇಹವನ್ನು ಎತ್ತಿಕೊಂಡು 4 ಕಿ.ಮೀ ಅಲೆದಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಬಳಿಕ, ಆಕೆ ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಸೋಮವಾರ ಸಂಜೆ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ADVERTISEMENT

23 ವರ್ಷದ ಆರೋಪಿ ಮಹಿಳೆ ಟ್ವಿಂಕಲ್ ರಾವುತ್, ಆಕೆಯ ಪತಿ 24 ವರ್ಷದ ರಾಮ ಲಕ್ಷಣ ರಾವುತ್ ನಡುವೆ ಜಗಳದಲ್ಲಿ ಈ ದುರಂತ ನಡೆದಿದೆ.

ಉದ್ಯೋಗಕ್ಕಾಗಿ ನಾಗ್ಪುರಕ್ಕೆ ಬಂದಿದ್ದ ದಂಪತಿ, ಕಾಗದ ಉತ್ಪನ್ನಗಳ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂಐಡಿಸಿ ಪ್ರದೇಶದ ಹಿಂಗ್ನಾ ರಸ್ತೆಯ ಬಳಿ ಕಂಪನಿ ನೀಡಿದ್ದ ಕೊಠಡಿಯಲ್ಲಿ ಅವರು ವಾಸವಿದ್ದರು.

ಪರಸ್ಪರ ಅಪನಂಬಿಕೆಯಿಂದಾಗಿ ಅವರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. ಸೋಮವಾರ ಸಂಜೆ ದಂಪತಿ ಯಾವುದೋ ವಿಷಯಕ್ಕೆ ಜಗಳ ಆಡಿದ್ದಾರೆ. ಈ ಸಂದರ್ಭ 4 ವರ್ಷದ ಹೆಣ್ಣು ಮಗು ಅಳಲು ಆರಂಭಿಸಿದೆ. ಇದರಿಂದ ತೀವ್ರ ಕೋಪಗೊಂಡ ಮಹಿಳೆ, ಮಗುವನ್ನು ಮನೆಯಿಂದ ಹೊರಗೆ ಕರೆದೊಯ್ದು ಮರದ ಕೆಳಗೆ ಕುತ್ತಿಗೆ ಬಿಗಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ಕೊಂದ ತಾಯಿ, ಮೃತದೇಹವನ್ನು ಎತ್ತಿಕೊಂಡು 4 ಕಿ.ಮೀ ಅಲೆದಾಡಿದ್ದಾಳೆ. ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸ್ ಗಸ್ತು ವಾಹನ ಕಂಡು, ಅದನ್ನು ನಿಲ್ಲಿಸಿ ಹತ್ಯೆ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ, ಎಂಐಡಿಸಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ(ಹತ್ಯೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 24ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.