ADVERTISEMENT

ದೆಹಲಿ | ಚರಂಡಿಯಲ್ಲಿ ಬಿದ್ದಿದ್ದ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆ

ಸೂಟ್‌ಕೇಸ್‌ನಿಂದ ವಾಸನೆ ಬರುತ್ತಿರುವುದನ್ನು ಕಂಡು ಸಾರ್ವಜನಿಕರಿಂದ ಪೊಲೀಸರಿಗೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2022, 5:14 IST
Last Updated 8 ಡಿಸೆಂಬರ್ 2022, 5:14 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರೇಯಸಿಯ ದೇಹವನ್ನು ತುಂಡು ತುಂಡು ಮಾಡಿ ಎಸೆದ ಮೆಹ್ರೌಲಿಯ ಭೀಕರ ಕೊಲೆ ಪ್ರಕರಣ ಜೀವಂತವಾಗಿರುವಾಗಲೇ, ದೆಹಲಿಯಲ್ಲಿ ಮತ್ತೊಂದು ಇಂತಹದೇಕೊಲೆ ನಡೆದಿದೆ.

ಸೂಟ್‌ಕೇಸ್‌ನಲ್ಲಿ ಮಹಿಳೆಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ. ದೆಹಲಿಯ ಪಂಜಾಬಿ ಭಾಗ್‌ನಲ್ಲಿ ಘಟನೆ ಸೂಟ್‌ಕೇಸ್‌ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೂಟ್‌ಕೇಸ್‌ನಿಂದ ವಾಸನೆ ಬರುತ್ತಿದೆ ಎಂದು ಕಂಟ್ರೋಲ್‌ ರೂಮ್‌ಗೆ ಸಾರ್ವಜನಿಕರು ನೀಡಿದ ದೂರನ್ನು ಆಧರಿಸಿ, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ADVERTISEMENT

ಸ್ಥಳೀಯ ಚಾಲಕರ ಸಹಾಯದಿಂದ ಚರಂಡಿಯಲ್ಲಿದ್ದ ಸೂಟ್‌ಕೇಸ್‌ ಅನ್ನು ಮೇಲೆತ್ತಿ, ತೆರೆದಾಗ ಮಹಿಳೆಯೊಬ್ಬರ ಶವ ತೀವ್ರ ಕೊಳೆತ ಸ್ಥಿತಿಯಲ್ಲಿ ಇರುವುದು ಪತ್ತೆಯಾಗಿದೆ.

ಮಹಿಳೆಯ ವಯಸ್ಸು 28–30 ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಶವದ ಗುರುತು ಪತ್ತೆಯಾಗಿಲ್ಲ.

ಮರಣೋತ್ತರ ಪರೀಕ್ಷೆಗೆ ಶವವನ್ನು ಸಂಜಯ್‌ ಗಾಂಧಿ ಸ್ಮಾರಕ ಆಸ್ಪತ್ರೆಗೆ ಸಾಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.