ADVERTISEMENT

ಡಿ.15ರ ನಂತರ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ

ಪಿಟಿಐ
Published 8 ಡಿಸೆಂಬರ್ 2020, 19:31 IST
Last Updated 8 ಡಿಸೆಂಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಯೋಧ್ಯೆ: ಇಲ್ಲಿ ರಾಮಮಂದಿರ ಕಟ್ಟಡಕ್ಕೆ ಪಾಯ ಹಾಕುವ ಕಾರ್ಯವು ಡಿ.15ರ ನಂತರ ಆರಂಭವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಅನಿಲ್‌ ಮಿಶ್ರಾ ತಿಳಿಸಿದರು.

ರಾಮಮಂದಿರ ನಿರ್ಮಾಣ ಸಮಿತಿಯ ಎರಡು ದಿನಗಳ ಸಭೆಯು ಮಂಗಳವಾರ ಮುಕ್ತಾಯಗೊಂಡಿತು. ‘ಮೊದಲ ಹಂತದಲ್ಲಿ ಆವರಣದ ಭದ್ರತಾ ಗೋಡೆ ನಿರ್ಮಾಣವಾಗಲಿದೆ’ ಎಂದು ಅವರು ತಿಳಿಸಿದರು.

‘ರಾಮಜನ್ಮಭೂಮಿ ಆವರಣದಲ್ಲಿರುವ 67 ಎಕರೆ ಜಾಗದಲ್ಲಿ ಸ್ಥಳೀಯ ಆಡಳಿತದ ಜೊತೆಗೂಡಿ ಅಭಿವೃದ್ಧಿ ಕಾರ್ಯಗಳನ್ನು ಟ್ರಸ್ಟ್‌ ನಡೆಸಲಿದೆ’ ಎಂದು ಟ್ರಸ್ಟ್‌ನ ಖಜಾಂಚಿ ಗೋವಿಂದ್‌ ದೇವ್‌ ಗಿರಿ ತಿಳಿಸಿದರು.

ADVERTISEMENT

ಲಾರ್ಸೆಲ್‌ ಆ್ಯಂಡ್‌ ಟುಬ್ರೊ ಕಂಪನಿ, ಟಾಟಾ ಕನ್ಸಲ್ಟಿಂಗ್‌ ಎಂಜಿನಿಯರ್ಸ್‌ ಲಿ., ಮದ್ರಾಸ್‌ ಐಐಟಿಯ ತಜ್ಞರು, ಆಚಾರ್‌ ಧಾಮ್‌ ದೇವಸ್ಥಾನದ ವಾಸ್ತುಶಿಲ್ಪಿ ಬ್ರಹಂ ವಿಹಾರಿ ಸ್ವಾಮಿ ಹಾಗೂ ರಾಮ ಮಂದಿರದ ವಾಸ್ತುಶಿಲ್ಪಿ ಆಶಿಶ್‌ ಸೋಂಪುರ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.ತಜ್ಞರು ಶೀಘ್ರದಲ್ಲೇ ಅವರ ವರದಿಯನ್ನು ನಿರ್ಮಾಣ ಸಮಿತಿಗೆ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.