ADVERTISEMENT

ಪರಿಸರ ಕಾನೂನುಗಳನ್ನು ಮೋದಿ ದುರ್ಬಲಗೊಳಿಸಿದ್ದಾರೆ: ಜೈರಾಂ ರಮೇಶ್ ಆರೋಪ

ಪಿಟಿಐ
Published 5 ಜೂನ್ 2022, 13:31 IST
Last Updated 5 ಜೂನ್ 2022, 13:31 IST
ಜೈರಾಂ ರಮೇಶ್ - ಪಿಟಿಐ ಸಂಗ್ರಹ ಚಿತ್ರ
ಜೈರಾಂ ರಮೇಶ್ - ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ಜಾಗತಿಕ ವೇದಿಕೆಯಲ್ಲಿ ಪರಿಸರ ಸ್ನೇಹಿ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಪರಿಸರ ಕಾನೂನುಗಳನ್ನು ದುರ್ಬಲಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ದೂರಿದ್ದಾರೆ.

‘ಇಂದು ವಿಶ್ವ ಪರಿಸರ ದಿನ. 1973ರಿಂದಲೂ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವ ಗುರು ‘ಲೈಫ್ (ಲೈಫ್‌ಸ್ಟೈಲ್ ಫಾರ್ ಎನ್ವಿರಾನ್‌ಮೆಂಟ್)’ಗೆ ಚಾಲನೆ ನೀಡುತ್ತಿದ್ದಾರೆ. ಇದು ಎಲ್ಲ ಪರಿಸರ ಕಾನೂನು, ಅರಣ್ಯ ಕಾನೂನುಗಳು, ಇವುಗಳಿಗೆ ಸಂಬಂಧಿಸಿದ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವ ಅವರ ಬೂಟಾಟಿಕೆ. ದೇಶದಲ್ಲಿ ಇಂಥ ಬೂಟಾಟಿಕೆ ಮಾಡಿಕೊಂಡು ಜಾಗತಿಕ ವೇದಿಕೆಯಲ್ಲಿ ಪರಿಸರ–ಚಾಂಪಿಯನ್‌ನಂತೆ ಪೋಸ್ ನೀಡುತ್ತಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಸಹ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಹವಾಮಾನ ಬದಲಾವಣೆಯನ್ನು ಅವರು (ಮೋದಿ) ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಅವರ ಹೇಳಿಕೆಯಿಂದಲೇ ನಮಗೆ ತಿಳಿಯಿತು ಎಂದು ಹೇಳಿದ್ದಾರೆ. ‘ಹವಾಮಾನ ಬದಲಾವಣೆಯಿಲ್ಲ, ನಮ್ಮ ಸಹನೆ ಮತ್ತು ಅಭ್ಯಾಸಗಳು ಬದಲಾಗಿವೆ’ ಎಂದು ಮೋದಿ ಹೇಳಿದ್ದರು. ಇದನ್ನು ಉಲ್ಲೇಖಿಸಿ ಖೇರಾ ಮೋದಿ ಬಗ್ಗೆ ಟೀಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.