ಜೈಪುರ: ‘ಜಾಗತಿಕ ಸಾಮರಸ್ಯ ಹಾಗೂ ಏಳ್ಗೆಗಾಗಿ ಭಾರತ ಧೃಢನಿಶ್ಚಯದಿಂದ ಬದ್ಧವಾಗಿದ್ದು, ಇಡೀ ಜಗತ್ತಿಗೆ ಈಗ ಭಾರತದ ನೈಜ ಶಕ್ತಿಯ ಪರಿಚಯವಾಗಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಜೈಪುರದ ಹರಮಾಡಾದಲ್ಲಿರುವ ರವಿನಾಥ ಮಹಾರಾಜ್ ಆಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತವು ಎಂದಿಗೂ ಯಾರನ್ನೂ ದ್ವೇಷಿಸಿಲ್ಲ. ಆದರೆ, ನಿಮ್ಮಲ್ಲಿ ಅಧಿಕಾರವಿದ್ದರೆ, ಜಗತ್ತು ದ್ವೇಷ ಹಾಗೂ ಪ್ರೀತಿಯ ಭಾಷೆಯನ್ನು ಅರ್ಥೈಸಿಕೊಳ್ಳುತ್ತದೆ’ ಎಂದು ಹೇಳಿದ್ದಾರೆ.
‘ಇದು ಜಗತ್ತಿನ ಸ್ವಭಾವವಾಗಿದೆ. ಇದು ಯಾವತ್ತಿಗೂ ಬದಲಾಗುವುದಿಲ್ಲ. ಜಗತ್ತಿನ ಒಳಿತಿಗಾಗಿ ನಾವು ಮತ್ತಷ್ಟು ಪ್ರಬಲರಾಗಬೇಕು, ಆಗಲೇ ನಮ್ಮ ಸಾಮರ್ಥ್ಯವನ್ನು ಜಗತ್ತು ಪರಿಗಣಿಸುತ್ತದೆ’ ಎಂದು ತಿಳಿಸಿದ್ದಾರೆ.
‘ಜಗತ್ತಿನ ಕಲ್ಯಾಣವೇ ನಮ್ಮ ಧರ್ಮವಾಗಿದೆ. ಅದರಲ್ಲೂ ವಿಶೇಷವಾಗಿ ಹಿಂದೂಧರ್ಮದ ಆದ್ಯ ಕರ್ತವ್ಯವಾಗಿದೆ’ ಎಂದು ಭಾಗವತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.