ADVERTISEMENT

ಬೃಹತ್‌ ಭಗವದ್ಗೀತೆ ಅನಾವರಣ

670 ಪುಟಗಳು

ಪಿಟಿಐ
Published 26 ಫೆಬ್ರುವರಿ 2019, 19:26 IST
Last Updated 26 ಫೆಬ್ರುವರಿ 2019, 19:26 IST
‘ಬೃಹತ್‌ ಭಗವದ್ಗೀತೆ’ ಗ್ರಂಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪೂಜೆ ಸಲ್ಲಿಸಿದರು
‘ಬೃಹತ್‌ ಭಗವದ್ಗೀತೆ’ ಗ್ರಂಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪೂಜೆ ಸಲ್ಲಿಸಿದರು   

ನವದೆಹಲಿ: ಇಲ್ಲಿನ ಇಸ್ಕಾನ್‌ ದೇಗುಲ ಸಂಕೀರ್ಣದಲ್ಲಿ ಇಡಲಾಗಿರುವ 670 ಪುಟಗಳು ಮತ್ತು 800 ಕೆಜಿ ತೂಕ ಹೊಂದಿರುವ ಬೃಹತ್‌ ಭಗವದ್ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅನಾವರಣಗೊಳಿಸಿದರು.ವಿಶ್ವದ ಅತಿದೊಡ್ಡ ಮುದ್ರಿತ ಆಧ್ಯಾತ್ಮಿಕ ಗ್ರಂಥ ಎಂಬ ಹಿರಿಮೆಗೆ ಭಗವದ್ಗೀತೆ ಪಾತ್ರವಾಗಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಖಾನ್‌ ಮಾರ್ಕೆಟ್‌ ನಿಲ್ದಾಣದಿಂದ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರು.

ಇಸ್ಕಾನ್ ಎಂದೇ ಹೆಸರುವಾಸಿಯಾಗಿರುವ ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞ ಸಂಘವು ವಿಶ್ವದ ವಿವಿಧೆಡೆ 400ಕ್ಕೂ ಹೆಚ್ಚು ದೇಗುಲಗಳು ಮತ್ತು 100ಕ್ಕೂ ಹೆಚ್ಚು ಸಸ್ಯಾಹಾರಿ ಉಪಾಹಾರ ಗೃಹಗಳನ್ನು ನಡೆಸುತ್ತಿದೆ.

ADVERTISEMENT

ಬೃಹತ್‌ ಭಗವದ್ಗೀತೆಯ ವಿಶೇಷತೆ

* 9.18 ಅಡಿ ಉದ್ದ, 6.5 ಅಡಿ ಅಗಲದ ಬೃಹತ್‌ ಗ್ರಂಥ. ಇಟಲಿಯ ಮಿಲಾನ್‌ನಲ್ಲಿ ಮುದ್ರಿಸಲಾಗಿದೆ

* ಗ್ರಂಥ ರೂಪಿಸಲು ತಗುಲಿದ ವೆಚ್ಚ ₹1.5 ಕೋಟಿ.

* ಈ ಮೊತ್ತವನ್ನುಇಸ್ಕಾನ್‌ನ ಇಟಲಿ ಘಟಕ ದಾನಿಗಳಿಂದ ಸಂಗ್ರಹಿಸಿ ಭರಿಸಿದೆ

* 18 ಉತ್ಕೃಷ್ಟ ಚಿತ್ರಗಳು ಗ್ರಂಥದಲ್ಲಿವೆ.

* ಉಕ್ಕಿನ ಸ್ಕ್ರೂಗಳಿಂದಭದ್ರಗೊಳಿಸಿದ ಕಾರ್ಬನ್‌ ಫೈಬರ್‌ನ ರಕ್ಷಾಪುಟ.

*ರಕ್ಷಾಪುಟದ ಮೇಲೆ ಕೃಷ್ಣಾರ್ಜುನರ ಆಕರ್ಷಕ ವರ್ಣಚಿತ್ರವಿದೆ. ಚಿನ್ನ–ಬೆಳ್ಳಿಯಂಥ ಅಮೂಲ್ಯ ಲೋಹಗಳು ಮತ್ತು ಹರಳುಗಳಿಂದ ಇದನ್ನು ಅಲಂಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.