ADVERTISEMENT

ಮೋದಿ ನಿರ್ಧಾರದಿಂದ ಖುಷಿಯಾಗುವರೇ ವೀರಪ್ಪ ಮೊಯಿಲಿ?

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 9:03 IST
Last Updated 27 ನವೆಂಬರ್ 2019, 9:03 IST
   

ನವದೆಹಲಿ: ಕೇಂದ್ರದ ಆಡಳಿತ ಸುಧಾರಣ ಇಲಾಖೆಯಲ್ಲಿ ಹಲವು ವರ್ಷಗಳಿಂದ ದೂಳು ಹಿಡಿದು ಕುಳಿತಿದ್ದ ಎರಡನೇ ಆಡಳಿತ ಸುಧಾರಣಾ ಆಯೋಗ–2005ರ ವರದಿ ಜಾರಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ದೇಶದ ಆಡಳಿತ ಸುಧಾರಣೆಗಾಗಿ 2005ರಲ್ಲಿ ಮನಮೋಹನ್‌ ಸಿಂಗ್‌ ಅವರ ಸರ್ಕಾರ ಎರಡನೇ ಆಡಳಿತ ಸುಧಾರಣಾ ಆಯೋಗವನ್ನು ರಚನೆ ಮಾಡಿತ್ತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅದರ ಅಧ್ಯಕ್ಷರಾಗಿದ್ದರು.2006ರಿಂದ 2009ರ ವರೆಗೆ ಈ ಆಯೋಗವು 15 ಅಧ್ಯಾಯಗಳ ಬೃಹತ್‌ ವರದಿ ಸಲ್ಲಿಸಿತ್ತು. ಆಡಳಿತ ಸುಧಾರಣೆಗಾಗಿ ಮೊಯಿಲಿ ಆಯೋಗ ಹಲವು ಸಲಹೆ ಸೂಚನೆಗಳನ್ನು ನೀಡಿತ್ತಾದರೂ, ನಂತರದಲ್ಲಿ ಅದು ಜಾರಿಯಾಗದೇ ಉಳಿಯಿತು.

ಸದ್ಯ ಮೋದಿ ಸರ್ಕಾರ ಈ ವರದಿಯನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲು ಮೋದಿಆಡಳಿತ ಸುಧಾರಣಾ ಇಲಾಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ರಾಷ್ಟ್ರೀಯ ಆಂಗ್ಲ ನಿಯತಕಾಲಿಕೆThe Week ಮೂಲಗಳ ಮಾಹಿತಿ ಉಲ್ಲೇಖಿಸಿ ವರದಿ ಮಾಡಿದೆ. ಅಲ್ಲದೆ, ಈ ವರದಿ ಜಾರಿಯಾಗದೇ ಉಳಿದ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ ಎಂದೂThe Week ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.