ನ್ಯಾಯಮೂರ್ತಿ ಯಶವಂತ್ ವರ್ಮಾ
ಪಿಟಿಐ ಸಂಗ್ರಹ ಚಿತ್ರ
ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದದ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸುವ ಸಮಿತಿಗೆ ಇಬ್ಬರು ವಕೀಲರು ನೆರವಾಗಲಿದ್ದಾರೆ.
ರೋಹನ್ ಸಿಂಗ್ ಮತ್ತು ಸಮೀಕ್ಷಾ ದುವಾ ಸಮಿತಿಗೆ ಸಲಹೆ ನೀಡಲು ನೇಮಕಗೊಂಡ ವಕೀಲರು. ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸಲು ಕೋರಿರುವ ಸೂಚನೆಯಲ್ಲಿ ಮಾಡಿರುವ ಆರೋಪಗಳ ಕುರಿತ ತನಿಖೆಗಾಗಿ ರಚಿಸಲಾದ ಮೂವರು ಸದಸ್ಯರ ಸಮಿತಿಗೆ ಈ ಇಬ್ಬರೂ ವಕೀಲರು ಸಹಾಯ ಮಾಡಲಿದ್ದಾರೆ.
ಯಶವಂತ್ ಅವರನ್ನು ಪದಚ್ಯುತಗೊಳಿಸುವಂತೆ ಬಹು–ಪಕ್ಷಗಳು ನೀಡಿದ ನೋಟಿಸ್‌ಗಳನ್ನು ಲೋಕಸಭೆ ಸ್ಪೀಕರ್ ಬಿರ್ಲಾ ಅವರು ಕಳೆದ ತಿಂಗಳು ಅಂಗೀಕರಿಸಿದ್ದರು.
ಯಶವಂತ್ ಅವರ ಅಧಿಕೃತ ನಿವಾಸದಲ್ಲಿ ಮಾರ್ಚ್ 14ರಂದು ಸುಟ್ಟ ನೋಟುಗಳ ತುಂಡುಗಳು ಪತ್ತೆಯಾದ ನಂತರ ಅವರನ್ನು ದೆಹಲಿಯಿಂದ ಅಲಹಾಬಾದ್ ಹೈಕೋರ್ಟ್‌ಗೆ ವಾಪಾಸ್ ಕಳುಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.