ADVERTISEMENT

ಪ್ರತ್ಯೇಕವಾದಿಗಳ ಪರ ಮೆಹಬೂಬಾ ಮುಫ್ತಿ ಹೇಳಿಕೆ: ವಿವಾದ

ಏಜೆನ್ಸೀಸ್
Published 23 ಫೆಬ್ರುವರಿ 2019, 9:27 IST
Last Updated 23 ಫೆಬ್ರುವರಿ 2019, 9:27 IST
   

ಶ್ರೀನಗರ: ಕಾಶ್ಮೀರ ಪ್ರತ್ಯೇಕತಾವಾದಿಗಳ ಪರವಾಗಿ ಮಾತನಾಡಿರುವ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಶನಿವಾರ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ.

ಪುಲ್ವಾಮ ದಾಳಿ ಮತ್ತುವಿಶೇಷಾಧಿಕಾರ ಕಲಂ 35ಎ ವಿಚಾರಣೆ ಇರುವ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್‌ ಫ್ರಂಟ್‌ (ಜೆಕೆಎಲ್‌ಎಫ್) ಅಧ್ಯಕ್ಷ ಯಾಸಿನ್‌ ಮಲ್ಲಿಕ್ ಅವರನ್ನು ಬಂಧಿಸಿರುವುದಕ್ಕೆ ಪಿಡಿಪಿ ನಾಯಕಿ ಖಂಡಿನೆ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಪ್ರತ್ಯೇಕವಾದಿಗಳು ಮತ್ತು ಹುರಿಯತ್‌ ನಾಯಕರ ನಡುವೆ ಇತ್ತೀಚೆಗೆ ನಡೆದ ಗಲಭೆಯ ನಿದರ್ಶನ ನೀಡಿ ಮಾತನಾಡಿದ ಮುಫ್ತಿ, ‘ನೀವು ಒಬ್ಬ ವ್ಯಕ್ತಿಯನ್ನು ಬಂಧಿಸಬಹುದೇ ಹೊರತು ಅವರ ಆಲೋಚನೆಗಳನ್ನಲ್ಲಾ’ ಎಂದು ಹೇಳಿದ್ದಾರೆ.

ADVERTISEMENT

‘ಕಳೆದ 24 ತಾಸಿನಲ್ಲಿ ಹುರಿಯತ್‌ ನಾಯಕರು ಮತ್ತು ಜಮಾತ್‌ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ನೀವು ಕಾನೂನಿನ ಯಾವ ನೆಲೆಯಲ್ಲಿ ಅವರನ್ನು ಬಂಧಿಸಿದ್ದೀರಿ? ಸ್ಪಷ್ಟನೆ ನೀಡಿ. ವ್ಯಕ್ತಿಯನ್ನು ಬಂಧಿಸಬಹುದು, ಅವರ ಯೋಚನೆಗಳನ್ನಲ್ಲಾ’ ಎಂದು ಟ್ವೀಟ್‌ ಮಾಡಿದ್ದಾರೆ.

ಐದು ಪ್ರತ್ಯೇಕವಾದಿಗಳಿಗೆ ನೀಡುತ್ತಿರುವ ಭದ್ರತೆಯನ್ನು ವಾಪಾಸ್‌ ಪಡೆಯುವುದಾಗಿ ಜಮ್ಮು ಮತ್ತು ಕಾಶ್ಮೀರ ಆಡಳಿತಕಳೆದ ವಾರವಷ್ಟೇ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.