ADVERTISEMENT

ನನ್ನ ಆತ್ಮಬಲ ಕುಗ್ಗಿಸಲು ಸಾಧ್ಯವಿಲ್ಲ: ಜೈಲಿನಿಂದ ಸಿಸೋಡಿಯಾ ಸಂದೇಶ

ಪಿಟಿಐ
Published 11 ಮಾರ್ಚ್ 2023, 5:53 IST
Last Updated 11 ಮಾರ್ಚ್ 2023, 5:53 IST
ಮನೀಷ್ ಸಿಸೋಡಿಯಾ
ಮನೀಷ್ ಸಿಸೋಡಿಯಾ   

ನವದೆಹಲಿ: ಜೈಲಿಗೆ ಹಾಕಿ ನೀವು ನನಗೆ ತೊಂದರೆ ಕೊಡಬಹುದು. ಆದರೆ ನನ್ನ ಆತ್ಮಬಲವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಜೈಲಿನಿಂದ ಸಂದೇಶ ರವಾನಿಸಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ದೆಹಲಿ ಸಿಸೋಡಿಯಾ ಅವರನ್ನು ದೆಹಲಿಯ ವಿಶೇಷ ನ್ಯಾಯಾಲಯವು ಮಾರ್ಚ್ 17ರವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ನೀಡಿದೆ.

ನೀವು ನನ್ನನ್ನು ಜೈಲಿಗೆ ಹಾಕುವ ಮೂಲಕ ತೊಂದರೆ ಕೊಡಬಹುದು. ಆದರೆ ನನ್ನ ಆತ್ಮಬಲವನ್ನು ಕುಗ್ಗಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರಿಂದ ತೊಂದರೆಗೊಳಗಾದರು. ಆದರೆ ಅವರ ಉತ್ಸಾಹ ಕುಂದಲಿಲ್ಲ ಎಂದು ಜೈಲಿನಿಂದ ಮನೀಷ್ ಸಿಸೋಡಿಯಾ ಕಳುಹಿಸಿದ ಸಂದೇಶವನ್ನು ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರುವರಿ 26ರಂದು ಆಮ್ ಆದ್ಮಿ ಪಕ್ಷದ ಮುಖಂಡ ಸಿಸಿಯೋಡಿಯಾರನ್ನು ಸಿಬಿಐ ಬಂಧಿಸಿತ್ತು. ಬಳಿಕ ಈ ವಾರ ಇ.ಡಿ ತನಿಖಾ ಸಂಸ್ಥೆಯಿಂದಲೂ ಬಂಧನಕ್ಕೊಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.