ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಿರಿಯ ವಯಸ್ಸಿನ ಮೇಯರ್‌, ಶಾಸಕ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 21:15 IST
Last Updated 16 ಫೆಬ್ರುವರಿ 2022, 21:15 IST
ಆರ್ಯ ರಾಜೇಂದ್ರನ್‌
ಆರ್ಯ ರಾಜೇಂದ್ರನ್‌   

ತಿರುವನಂತಪುರ: ದೇಶದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ಮೇಯರ್‌ ಹುದ್ದೆ ಅಲಂಕರಿಸಿದ ತಿರುವನಂತರಪುರ ಮಹಾನಗರ ಪಾಲಿಕೆಯ ಮೇಯರ್‌ ಆರ್ಯ ರಾಜೇಂದ್ರನ್‌ ಅವರು, ಕೇರಳದ ಅತ್ಯಂತ ಕಿರಿಯ ವಯಸ್ಸಿನ ಶಾಸಕ ಕೆ.ಎಂ.ಸಚಿನ್‌ದೇವ್‌ ಅವರನ್ನು ವರಿಸಲಿದ್ದಾರೆ.

ಇಬ್ಬರೂ ಸಿಪಿಎಂ ಪಕ್ಷದವರೇ ಆಗಿದ್ದು, ಎರಡೂ ಕುಟುಂಬದವರು ವಿವಾಹದ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಆರ್ಯ ಅವರು ತಿರುವನಂತರಪುರ ಮೂಲದವರಾಗಿದ್ದರೆ, ಸಚಿನ್‌ದೇವ್‌ ಅವರುಕೋಯಿಕ್ಕೋಡ್‌ನವರು. ಇಬ್ಬರೂ ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಫ್‌ಎಫ್‌ಐ) ಸಂಘಟನೆಯಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ADVERTISEMENT

ಆರ್ಯ ಅವರು ಮೇಯರ್‌ ಆದಾಗ ಅವರ ವಯಸ್ಸು 21. ಆಗಿನ್ನು ಅವರು ಪದವಿ ವ್ಯಾಸಂಗ ಮಾಡುತ್ತಿದ್ದರು. ಸಚಿನ್‌ದೇವ್‌ (28) ಅವರು ಎಲ್‌ಎಲ್‌ಬಿ ಪದವೀಧರರಾಗಿದ್ದು, ಎಸ್‌ಎಫ್‌ಐನ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

‘ನಾನು ಮತ್ತು ಸಚಿನ್‌ದೇವ್ ಬಹುಕಾಲದ ಸ್ನೇಹಿತರು. ಒಂದೇ ರಾಜಕೀಯ ಸಿದ್ಧಾಂತವನ್ನು ನಂಬಿರುವವರು.ಮದುವೆಯ ಬಗ್ಗೆ ಪರಸ್ಪರ ಚರ್ಚಿಸಿ ಪೋಷಕರಿಗೆ ಮಾಹಿತಿ ನೀಡಿದೆವು. ವಿವಾಹದ ದಿನಾಂಕವನ್ನು ಪಕ್ಷ ಮತ್ತು ಕುಟುಂಬದವರು ನಿರ್ಧರಿಸುತ್ತಾರೆ’ ಎಂದುಆರ್ಯ ರಾಜೇಂದ್ರನ್‌ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.