ADVERTISEMENT

ಗುರುತು ಮರೆಮಾಚಿ ಮದುವೆಯಾದ ಯುವಕ: ಪ್ರಕರಣ ದಾಖಲು

ಪಿಟಿಐ
Published 13 ಮಾರ್ಚ್ 2019, 19:59 IST
Last Updated 13 ಮಾರ್ಚ್ 2019, 19:59 IST

ಡಿಯೋರಿಯಾ ಉತ್ತರ ಪ್ರದೇಶ: ತನ್ನ ಗುರುತು ಮರೆಮಾಚಿ ಯುವತಿಯೊಬ್ಬಳನ್ನು ವಿವಾಹವಾದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಶ್ಚಿಮ್ ಟೋಲಾ ಪ್ರದೇಶದ ರಿಜ್ವಾನ್ ಎಂಬ ಯುವಕ ಒಂದೂವರೆ ತಿಂಗಳು ಕಾಲ ಯುವತಿಯೊಂದಿಗೆ ವಾಸವಿದ್ದ. ಅಶುತೋಷ್ ರೈ ಎಂಬ ಹೆಸರಿನೊಂದಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಔಷಧಿ ವ್ಯಾಪಾರಿಯಾದ ಆರೋಪಿ, ಕುಶಿನಗರ ಜಿಲ್ಲೆಯ ರಾಮ್ಕೋಲಾ ಪ್ರದೇಶದಲ್ಲಿ ಔಷಧಿ ಸರಬರಾಜು ಮಾಡುವ ಸಂದರ್ಭದಲ್ಲಿ ಯುವತಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.