ADVERTISEMENT

ಜಿಕಾ ವೈರಸ್: ರಾಜಸ್ಥಾನದಲ್ಲಿ ಮತ್ತೆ 5 ಮಂದಿಗೆ ಸೋಂಕು; ಸಂಖ್ಯೆ 60ಕ್ಕೆ ಏರಿಕೆ

ಏಜೆನ್ಸೀಸ್
Published 15 ಅಕ್ಟೋಬರ್ 2018, 4:49 IST
Last Updated 15 ಅಕ್ಟೋಬರ್ 2018, 4:49 IST
   

ಜೈಪುರ: ಇಲ್ಲಿನ ಐದು ಮಂದಿಜಿಕಾ ಸೊಂಕಿಗೆ ಒಳಪಟ್ಟಿರುವುದು ಭಾನುವಾರ ಪತ್ತೆಯಾಗಿದ್ದು, ಇದುವರೆಗೆ ಈ ಸಂಖ್ಯೆ 60ಕ್ಕೆ ತಲುಪಿದೆ ಎಂದು ರಾಜಸ್ಥಾನದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವೀಣಾ ಗುಪ್ತಾ ಅವರು ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

60 ರೋಗಿಗಳಲ್ಲಿ 45 ರೋಗಿಗಳು ಚಿಕಿತ್ಸೆಯ ನಂತರ ಆರೋಗ್ಯವಾಗಿದ್ದಾರೆ. ಹೆಚ್ಚಿನ ಪ್ರಕರಣಗಳು ಶಾಸ್ತ್ರೀ ನಗರದಲ್ಲಿ ಪತ್ತೆಯಾಗಿವೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಶಾಸ್ತ್ರಿ ನಗರದಲ್ಲಿ 76 ಸಾವಿರ ಮನೆಗಳಲ್ಲಿ ಆರೋಗ್ಯ ಸಮೀಕ್ಷೆ ಕೈಗೊಳ್ಳಲಾಗಿದ್ದು, ಇದರಲ್ಲಿ 64 ಸಾವಿರ ಮನೆಗಳಲ್ಲಿ ಸೊಳ್ಳೆಗಳಿರುವುದು, ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳ ರಾಶಿ ಕಂಡು ಬಂದಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ.

ಈ ಜಿಕಾ ಸೊಂಕಿನಿಂದ ಗರ್ಭಿಣಿಯರಿಗೆ ಹಾಗೂ ಗರ್ಭದಲ್ಲಿರುವ ಮಗುವಿನ ಮಿದುಳಿನ ಮೇಲೆದುಷ್ಪರಿಣಾಮ ಬೀರುವಸಾಧ್ಯತೆ ಇದ್ದು, ಸೋಂಕು ಪತ್ತೆಯಾಗಿರುವ ಪ್ರದೇಶದಲ್ಲಿರುವಗರ್ಭಿಣಿಯರಿಗೆಬೇರೆಡೆಗೆ ಸ್ಥಳಾಂತರಿಸುವಂತೆಈಗಾಗಲೇ ರಾಜ್ಯ ಆರೋಗ್ಯ ಇಲಾಖೆಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.