ADVERTISEMENT

ಅತ್ಯಾಚಾರವನ್ನು ರಾಜಕೀಯಗೊಳಿಸಲ್ಲ ಎಂದ ಮೋದಿಯೇ ಮಾತು ತಪ್ಪಿದರು

​ಪ್ರಜಾವಾಣಿ ವಾರ್ತೆ
Published 4 ಮೇ 2018, 8:30 IST
Last Updated 4 ಮೇ 2018, 8:30 IST
ಚಿತ್ರಕೃಪೆ: ದಿ ಕ್ವಿಂಟ್‌
ಚಿತ್ರಕೃಪೆ: ದಿ ಕ್ವಿಂಟ್‌   

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಗ್ಲೆಂಡಿಗೆ ಏಪ್ರಿಲ್‌ 18ರಂದು ಭೇಟಿ ನೀಡಿದ್ದಾಗ ಅತ್ಯಾಚಾರ ಪ್ರಕರಣಗಳನ್ನು ರಾಜಕೀಯಗೊಳಿಸಬಾರದು ಎಂದಿದ್ದರು. ಬೀದರ್‌ನಲ್ಲಿ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ರಾಜ್ಯ ಚುನಾವಣಾ ಪ್ರಚಾರ ವೇಳೆ ಉಲ್ಲೇಖಿಸಿ ತಾವೇ ಹೇಳಿದ ಮಾತನ್ನು ಮೀರಿದರು.

ಏಪ್ರಿಲ್‌ 18 ರಂದು ಲಂಡನ್‌ನಲ್ಲಿ ಹೇಳಿದ್ದು:
‘ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ದುಃಖದಾಯಕ ಸಂಗತಿ. ಆ ಸರ್ಕಾರದಲ್ಲಿ ಇಷ್ಟು, ಈ ಸರ್ಕಾರದಲ್ಲಿ ಇಷ್ಟು ಅತ್ಯಾಚಾರಗಳು ನಡೆದವು ಎಂದು ಹೋಲಿಕೆ ಮಾಡುವವ ನಾನಲ್ಲ. ಅತ್ಯಾಚಾರದಂತದ ಹೀನಕೃತ್ಯ ಮತ್ತೊಂದಿಲ್ಲ’

ಮೇ 3 ರಂದು ಕಲಬುರ್ಗಿಯಲ್ಲಿ ಹೇಳಿದ್ದು:
‘ಸಹೋದರ ಮತ್ತು ಸಹೋದರಿಯರೇ, ಕರ್ನಾಟಕದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಕಣ್ಣಿಗೆ ಕಾಣುತ್ತಿವೆ. ಪಕ್ಕದ ಜಿಲ್ಲೆಯಾದ ಬೀದರ್‌ನಲ್ಲಿ ದಲಿತ ಬಾಲಕಿಯೊಬ್ಬಳು ಅತ್ಯಾಚಾರಕ್ಕೆ ಒಳಗಾದಳು. ಆ ಕೃತ್ಯದ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗಲೂ ಸಿಗುತ್ತಿವೆ. ದೆಹಲಿಯಲ್ಲಿ ಮೇಣದ ಬೆಳಕಿನ ಪ್ರತಿಭಟನೆ ನಡೆಸುವ ಕಾಂಗ್ರೆಸ್‌ನವರಿಗೆ ನಾನು ನಿಮಗೆ ಕೇಳಬಯಸುತ್ತೇನೆ. ದಲಿತ ಬಾಲಕಿಯೊಬ್ಬಳು ಅತ್ಯಾಚಾರಕ್ಕೆ ಒಳಗಾದಾಗ ಎಲ್ಲಿ ಹೋಗಿತ್ತು ನಿಮ್ಮ ಮೇಣದ ಬೆಳಕು? ಎಲ್ಲಿ ಹೋಗಿದ್ದರು ನಿಮ್ಮ ನಾಯಕರು?

ಮೋದಿ ಮಾತುಗಳ ವಿಡಿಯೋ ಲಿಂಕ್‌:
https://bit.ly/2IcCZrF

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.