ADVERTISEMENT

ಅರಣ್ಯ ಒತ್ತುವರಿ ತೆರವು ಚರ್ಚಿಸಿ ಕ್ರಮ: ಸಚಿವ ರೈ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 19:59 IST
Last Updated 8 ಜೂನ್ 2013, 19:59 IST

ಮಂಗಳೂರು: ರಾಜ್ಯದಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸುವ ಸಲುವಾಗಿ ಆಯಾ ಕ್ಷೇತ್ರಗಳ ಶಾಸಕರ ಸಭೆ ಕರೆದು ನಿರ್ಧರಿಸಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ತಿಳಿಸಿದರು.

ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

`ಅರಣ್ಯ ಒತ್ತುವರಿ ತೆರವುಗೊಳಿಸವಂತೆ ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಹಾಗಾಗಿ ಕಾನೂನು ವ್ಯಾಪ್ತಿಯಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲು ಇದೇ 11ರಂದು ಸಂಜೆ ನಾಲ್ಕು ಗಂಟೆಗೆ ಒತ್ತುವರಿ ಸಮಸ್ಯೆ ಹೆಚ್ಚು ಇರುವ ಕ್ಷೇತ್ರಗಳ ಶಾಸಕರು ಹಾಗೂ ಹಿರಿಯ ಸಚಿವರ ಸಭೆ ಕರೆದಿದ್ದೇನೆ. ಕಾನೂನು ತೊಡಕು ಉಂಟಾಗದಂತೆ, ಜನರಿಗೆ ಸಮಸ್ಯೆ ಆಗದಂತೆ ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇವೆ' ಎಂದರು.

ಪಶ್ಚಿಮ ಘಟ್ಟವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ರೈ, `ದಕ್ಷಿಣ ಭಾರತದ ಪ್ರಮುಖ ನದಿಗಳ ಉಗಮ ಸ್ಥಾನವಾದ ಪಶ್ಚಿಮ ಘಟ್ಟದ ರಕ್ಷಣೆ ಎಲ್ಲರ ಕರ್ತವ್ಯ. ಈ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಜನರಿಗೆ ತೊಂದರೆ ಆಗದಂತಹ ನಿರ್ಧಾರಕ್ಕೆ ಬರುತ್ತೇವೆ. ಹಿರಿಯ ಪರಿಸರ ತಜ್ಞ ಗಾಡ್ಗೀಳ್ ಅವರ ವರದಿಯನ್ನು ಕೂಡಾಅಭ್ಯಸಿಸುತ್ತೇವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.