ADVERTISEMENT

ಅರಣ್ಯ, ವನ್ಯಜೀವಿ ಸಂರಕ್ಷಕ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 19:30 IST
Last Updated 7 ಜುಲೈ 2012, 19:30 IST

ಬೆಂಗಳೂರು:  ರಾಜ್ಯ ಅರಣ್ಯ ಇಲಾಖೆ ಮತ್ತು ದಿ.ಮಾರಪ್ಪ ಸ್ಮಾರಕ ಟ್ರಸ್ಟ್ ವತಿಯಿಂದ ಅಧಿಕಾರಿ ಹಾಗೂ ಸಿಬ್ಬಂದಿಗೆ ನೀಡುವ ಪ್ರಸ್ತಕ ಸಾಲಿನ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಕ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಿದೆ.

ಅರಣ್ಯ ಇಲಾಖೆಯ ವತಿಯಿಂದ ಕೀರ್ತಿಚಕ್ರ ಪಿ.ಶ್ರೀನಿವಾಸ್ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯು ಚಾಮರಾಜನಗರದ ಹನೂರು ವಲಯ ಅರಣ್ಯಾಧಿಕಾರಿ ಎಂ.ಶ್ರೀಧರ್, ಬಳ್ಳಾರಿಯ ಚಿತ್ರದುರ್ಗ ಉಪವಲಯ ಅರಣ್ಯಾಧಿಕಾರಿ ಇಮಾಮ್‌ಸಾಬ್, ಗುಲ್ಬರ್ಗದ ಚಿಂಚೋಳಿ ವಲಯದ ಅರಣ್ಯ ರಕ್ಷಕ ತುಕಪ್ಪ,  ಶಿವಮೊಗ್ಗದ  ಅಜ್ಜಂಪುರ ವಲಯದ ವೀಕ್ಷಕ ಆರ್.ನಾಗರಾಜ್,  ಬಳ್ಳಾರಿಯ ದಾವಣಗೆರೆ ವಲಯದ ಅರಣ್ಯಾಧಿಕಾರಿ ಟಿ.ನೀಲಕಂಠಪ್ಪ, 

ಮಂಗಳೂರಿನ ಕಾರ್ಕಳ ವಲಯದ ಅರಣ್ಯರಕ್ಷಕ ಲಿಂಗಯ್ಯ ನಾಯರಿ (ಅತ್ಯುತ್ತಮ ನೆಡುತೊಪು) , ಮೈಸೂರು ವಲಯದ ಅರಣ್ಯ ಸಂರಕ್ಷಣಾಧಿಕಾರಿ ಬಿ.ನಾಗರಾಜ್ (ಸಸ್ಯ ಕ್ಷೇತ್ರ), ಅರಣ್ಯ ಭವನದ ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ ಘಟಕ (ಅತ್ಯುತ್ತಮ ಸಂಶೋಧನಾ ಕಾರ್ಯ),  ಬೆಂಗಳೂರು ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಮಂಜುನಾಥ್ ( ಅತ್ಯುತ್ತಮ ಅರಣ್ಯ ಸಂಶೋಧನೆ), ಯಲ್ಲಾಪುರ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಜನಾರ್ದನ ಎಸ್.ಶಿರೂರು (  ಗ್ರಾಮ ಅರಣ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ) ಅವರಿ ದೊರಕಿದೆ.

ಬೆಳಗಾವಿಯ ಗೋಕಾಕ ವಲಯದ ಅರಣ್ಯ ವೀಕ್ಷಕ ವೈ.ಎನ್.ಚಿಕ್ಕೋಪ್ಪ, ಮಂಗಳೂರಿನ ಪಂಚ ವಲಯದ ಅರಣ್ಯ ರಕ್ಷಕ ಕೆ.ಬಿ.ಪ್ರಸಾದ್, ಮಂಗಳೂರು ಉಪವಲಯ ಅರಣ್ಯಾಧಿಕಾರಿ ಕೆ.ಲಿಂಗಪ್ಪಯ್ಯ, ಮಂಗಳೂರಿನ ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿ ಎನ್.ಚಿನ್ನಪ್ಪ, ಧಾರವಾಡದ ಹಿರೇಕೆರೂರು ಉಪವಲಯ ಅರಣ್ಯಾಧಿಕಾರಿ ಸಿದ್ದಮ್ಮ ನಾಗಪ್ಪ ಕರಿಗಾರ, ಚಿತ್ರದುರ್ಗ ಹಿರಿಯೂರು ಉಪ ವಲಯಧಿಕಾರಿ ಸಿ.ಬಸವರಾಜಪ್ಪ, ಶಿವಮೊಗ್ಗದ ಉಪವಲಯ ಅರಣ್ಯಾಧಿಕಾರಿ ಎಸ್.ವಿ.ಮಧುಕರ್,  ಗುಲ್ಬರ್ಗ ವಲಯದ ಅರಣ್ಯ ವೀಕ್ಷಕ ರಾಮರಾವ್ ( ಅರಣ್ಯ ಸಂರಕ್ಷಣೆ),  ಕೋಲಾರದ ಕೃಷಿಕ ಮುನಿವೆಂಕಟಪ್ಪ (ಅರಣ್ಯ ಕೃಷಿಕ), ಬೆಳಗಾವಿಯ ಗೋಕಾಕ ವಲಯದ ಅರಣ್ಯ ರಕ್ಷಕ ಎನ್.ಕೆ.ನರೇಲಿ (ಅತ್ಯುತ್ತಮ ನರ್ಸರಿ) ಮಾರಪ್ಪ ಸ್ಮಾರಕ ಟ್ರಸ್ಟ್ ನೀಡುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜುಲೈ 10 ರಂದು ಮಲ್ಲೇಶ್ವರದ ಅರಣ್ಯ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.