ADVERTISEMENT

ಆಂದೋಲಾಶ್ರೀ ಬಂಧಿಸಿದರೆ ಹೋರಾಟ

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:47 IST
Last Updated 29 ಅಕ್ಟೋಬರ್ 2017, 19:47 IST
ಕಲಬುರ್ಗಿಯಲ್ಲಿ ಭಾನುವಾರ ಜರುಗಿದ ಖಂಡನಾ ನಿರ್ಣಯ ಸಭೆಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಮಾತನಾಡಿದರು.
ಕಲಬುರ್ಗಿಯಲ್ಲಿ ಭಾನುವಾರ ಜರುಗಿದ ಖಂಡನಾ ನಿರ್ಣಯ ಸಭೆಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಮಾತನಾಡಿದರು.   

ಕಲಬುರ್ಗಿ: ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷರೂ ಆಗಿರುವ ಜೇವರ್ಗಿ ತಾಲ್ಲೂಕು ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಅವರನ್ನು ಬಂಧಿಸಿದರೆ ರಾಜ್ಯದಾದ್ಯಂತ ಹೋರಾಟ ಮಾಡುವ ನಿರ್ಣಯವನ್ನು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಇಲ್ಲಿ ಜರುಗಿದ ಖಂಡನಾ ನಿರ್ಣಯ ಸಭೆಯಲ್ಲಿ ಕೈಗೊಳ್ಳಲಾಯಿತು.

ಜೇವರ್ಗಿ ಪಟ್ಟಣದಲ್ಲಿ ಶ್ರೀರಾಮ ಸೇನೆ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಸಂದರ್ಭದಲ್ಲಿ ಆಂದೋಲಾಶ್ರೀ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಅವರನ್ನು ಬಂಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಜೇವರ್ಗಿಯಲ್ಲಿ ಪ್ರತಿಭಟನೆ ಮಾಡಿದ್ದವು.

ಸುದ್ದಿಗಾರರೊಂದಿಗೆ ಮಾತ ನಾಡಿದ ರಾಘವೇಶ್ವರ ಭಾರತಿ ಸ್ವಾಮೀಜಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊ ಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆಂದೋಲಾಶ್ರೀ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರನ್ನು ವಿರೋಧಿಸುವವರು ಮಾತಿ ನಲ್ಲೇ ಅಥವಾ ಸೈದ್ಧಾಂತಿಕವಾಗಿ ವಿರೋಧಿಸ ಬೇಕು. ಆದರೆ ಅವರನ್ನು ಬಂಧಿಸುವಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುವುದು ಸರಿಯಲ್ಲ’ ಎಂದರು.

ADVERTISEMENT

‘ಆಂದೋಲಾಶ್ರೀ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ. ಹೀಗಿದ್ದೂ ಅವರನ್ನು ಬಂಧಿಸಲು ಮುಂದಾಗಿ ರುವುದು ದುರುದ್ದೇಶ ಪೂರ್ವಕ ನಡೆಯಾಗಿದೆ. ಯಾರೇ ಆಗಲಿ ಕಾನೂನು ವಿರುದ್ಧದ ಹೋರಾಟವನ್ನು ಒಪ್ಪಲಾಗದು. ಶ್ರೀಗಳ ಬಂಧನಕ್ಕೆ ಒತ್ತಾಯಿಸಿ ಕೆಲ ಸಂಘಟನೆಗಳು ಜೇವರ್ಗಿಯಲ್ಲಿ ಪ್ರತಿಭಟನೆ ಮಾಡಿ ದ್ದು, ಈ ವೇಳೆ ಅವರ ಬಳಿ ಮಾರಕಾಸ್ತ್ರಗಳಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪೊಲೀಸರು ಕ್ರಮಕೈಗೊಳ್ಳಬೇಕು’ ಎಂದರು.

‘ರಾಜ್ಯದ ವಿವಿಧ ಮಠಾಧೀಶರು ಆಂದೋಲಾಶ್ರೀಗೆ ಬೆಂಬಲ ಸೂಚಿಸಿ ದ್ದಾರೆ. ಒಂದೊಮ್ಮೆ ಪೊಲೀಸರು ಅವರನ್ನು ಬಂಧಿಸಿದರೆ ಹೋರಾಟ ಆರಂಭಿಸಲಾಗುವುದು’ ಎಂದರು.

ಮಠಾಧೀಶರಾದ ಪರಮಾನಂದ ಸ್ವಾಮೀಜಿ, ಸಿದ್ದಾನಂದ ಸ್ವಾಮೀಜಿ, ಚಂದ್ರಶೇಖರ್ ಸ್ವಾಮೀಜಿ, ಮುನೀಂದ್ರದೇವಿ ಶಿವಾಚಾರ್ಯರು, ರೇವಣಸಿದ್ದ ಶಿವಾಚಾರ್ಯರು, ಶಿವ ಮೂರ್ತಿ ಶಿವಾಚಾರ್ಯರು, ಯೋಗಿನಿ ಪ್ರಭುಶ್ರೀ ತಾಯಿ, ಆರೂಢ ಭಾರತಿ ಸ್ವಾಮೀಜಿ, ಓಹಿಲೇಶ್ವರ ಸ್ವಾಮೀಜಿ, ಸೋಮಶೇಖರ ಶಿವಾ ಚಾರ್ಯರು ಹಾಗೂ ಸಂಘಟನೆಯ ಮುಖಂಡರಾದ ನಾಗಲಿಂಗಯ್ಯ ಮಠಪತಿ, ಎಂ.ಎಸ್.ಪಾಟೀಲ ನರಿಬೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.