ADVERTISEMENT

ಆಗುಂಬೆಯಲ್ಲಿ 9 ಸೆಂ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST

ಬೆಂಗಳೂರು: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯ ಹಲವೆಡೆ ಮತ್ತು ಒಳನಾಡಿನ ಕೆಲವೆಡೆ ಮಳೆಯಾಗಿದೆ. ಆಗುಂಬೆಯಲ್ಲಿ 9 ಸೆಂ.ಮೀ ಮಳೆಯಾಗಿದೆ.

ಸಿದ್ದಾಪುರ, ಕಮ್ಮರಡಿ 6, ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಬ್ರಹ್ಮಣ್ಯ, ಉಡುಪಿ, ಕಾರ್ಕಳ, ಜೋಯಿಡಾ, ತೀರ್ಥಹಳ್ಳಿ, ಶೃಂಗೇರಿ 5, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಮಾಣಿ, ಧರ್ಮಸ್ಥಳ, ಉಪ್ಪಿನಂಗಡಿ, ಸುಳ್ಯ, ಕೋಟ, ಗೋಕರ್ಣ, ಕುಮಟಾ, ಭಾಗಮಂಡಲ, ಮಡಿಕೇರಿ 4, ಕೊಲ್ಲೂರು, ಕುಂದಾಪುರ, ಕ್ಯಾಸಲ್‌ರಾಕ್, ಶಿರಾಲಿ, ಗೇರುಸೊಪ್ಪ, ಕದ್ರಾ, ನೀಲ್ಕುಂದ, ಗುಲ್ಬರ್ಗ, ಮುದಗಲ್, ಹೊಸನಗರ, ಕೊಟ್ಟಿಗೆಹಾರ, ಜಯಪುರ, ಕೊಪ್ಪ, ಸಕಲೇಶಪುರ 3, ಮಂಗಳೂರು, ಮೂಲ್ಕಿ, ಬಂಟ್ವಾಳ, ಹೊನ್ನಾವರ, ಕಾರವಾರ, ಭಟ್ಕಳ, ಅಂಕೋಲ, ಮಂಚಿಕೇರಿ, ಯಲ್ಲಾಪುರ, ಲೋಂಡ, ಬೆಳಗಾವಿ, ಸಿಂಧನೂರು, ಮಾದಾಪುರ, ಸೋಮವಾರಪೇಟೆ, ಲಿಂಗನಮಕ್ಕಿ, ತಾಳಗುಪ್ಪ, ಹುಂಚದಕಟ್ಟೆ, ಕಳಸ, ಬಾಳೆಹೊನ್ನೂರು, ಎನ್.ಆರ್.ಪುರ, ದಾವಣಗೆರೆ 2, ಕಿರವತ್ತಿ, ಬೆಳಗಾವಿ ವಿಮಾನ ನಿಲ್ದಾಣ, ನಿಪ್ಪಾಣಿ, ಕಲಘಟಗಿ, ಹಾನಗಲ್, ಕಾರಟಗಿ, ಮಹಾಲಿಂಗಪುರ, ಅಫಜಲಪುರ, ಗಂಗಾಪುರ, ನಾರಾಯಣಪುರ, ನಾಪೋಕ್ಲು, ಪೊನ್ನಂಪೇಟೆ, ಸಾಗರ, ಭದ್ರಾವತಿ, ಲಿಂಗದಹಳ್ಳಿ, ತರೀಕೆರೆ, ರಾಯಲ್ಪಾಡು, ಚನ್ನಗಿರಿ, ಹರಿಹರ, ಸಂತೆಬೆನ್ನೂರು, ಗೌರಿಬಿದನೂರು, ತುಮಕೂರಿನಲ್ಲಿ ತಲಾ 1 ಸೆಂ.ಮೀ.ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.