ADVERTISEMENT

ಆಚಾರ್ಯ ತಿರುನಕ್ಷತ್ರ ನಾಳೆ ಆಚರಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:30 IST
Last Updated 23 ಜೂನ್ 2012, 19:30 IST

ಬೆಂಗಳೂರು: ವಿಶಿಷ್ಟಾದ್ವೈತ ತತ್ವ ಪ್ರತಿಪಾದಕರಾದ ಸೋಮಯಾಜಿಯಾಂಡಾನ್ ಆಚಾರ್ಯರ 978ನೇ ಜನ್ಮದಿನವನ್ನು (ತಿರುನಕ್ಷತ್ರ) ಜೂನ್ 25ರ ಸೋಮವಾರ ಆಚರಿಸಲಾಗುವುದು.

ಇದರ ಅಂಗವಾಗಿ ಬೆಂಗಳೂರಿನ ರಾಮಮೋಹನಪುರದ 2ನೇ ಮುಖ್ಯರಸ್ತೆಯಲ್ಲಿರುವ  ಕಟ್ಟಡ ಸಂಖ್ಯೆ ನಂ. 21/1651ರಲ್ಲಿ, ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ದೇವಸ್ಥಾನ, ಹಾಸನ ತಾಲ್ಲೂಕು ಬೈಲಹಳ್ಳಿಯ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ, ಬೇಲೂರು ತಾಲ್ಲೂಕು ಹುಲುಗುಂಡಿಯ ಸೌಮ್ಯ ಕೇಶವ ಸ್ವಾಮಿ ದೇವಸ್ಥಾನ ಮತ್ತು ಅರಕೂಲಗೂಡು ತಾಲ್ಲೂಕು ರಾಮನಾಥಪುರದ ನರಸಿಂಹಸ್ವಾಮಿ ದೇವಾಲಯದಲ್ಲಿ ವೇದ ಮತ್ತು ದಿವ್ಯ ಪ್ರಬಂಧಗಳ ಪಠಣ, ಅಭಿಷೇಕ, ರಾಜಬೀದಿ ಉತ್ಸವ, ಶಾತ್‌ಮೊರೈ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇದೇ ನಿಮಿತ್ತ 24ರ ಭಾನುವಾರ ರಾಮನಾಥಪುರದಲ್ಲಿ ಆಚಾರ್ಯರ ಬಗ್ಗೆ ಪುಸ್ತಕ ಬಿಡುಗಡೆ ಮಾಡಲಾಗುವುದು. ರಾಷ್ಟ್ರಪ್ರಶಸ್ತಿ ವಿಜೇತ ವಿದ್ವಾಂಸರಾದ ಎಂ.ಎ.ಲಕ್ಷ್ಮೀತಾತಾಚಾರ್ ಮತ್ತು ಮೇಲುಕೋಟೆ ಎಂಬಾರ್ ರಂಗಾಚಾರ್ ಮುಖ್ಯ ಅತಿಥಿಗಳಾಗಿರುವರು ಎಂದು ಶ್ರೀ ರಾಮಮಿಶ್ರ ಸೋಮಯಾಜಿಯಾಂಡಾನ್ ಆಚಾರ್ಯರ ಸೇವಾ ಸಮಿತಿಗಳ ಒಕ್ಕೂಟ ತಿಳಿಸಿದೆ. ಮಾಹಿತಿಗೆ 94822 18962 ಸಂಪರ್ಕಿಸಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.