ADVERTISEMENT

ಆಡಳಿತದಲ್ಲಿ ಹಸ್ತಕ್ಷೇಪ: ಸಿಎಂಗೂ ಅನ್ವಯ-ಬೆಳಮಗಿ

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ಬೆಂಗಳೂರು: ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಮಕ್ಕಳು ಮತ್ತು ಕುಟುಂಬದ ಸದಸ್ಯರನ್ನು ದೂರ ಇಡಬೇಕೆನ್ನುವ ಸಲಹೆಯನ್ನು ಪಕ್ಷದ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಅವರು ನೀಡಿದ್ದು, ಅದು ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರಿಗೂ ಅನ್ವಯಿಸುತ್ತದೆ ಎಂದು ಪಶುಸಂಗೋಪನಾ ಸಚಿವ ರೇವು ನಾಯಕ ಬೆಳಮಗಿ ಮಂಗಳವಾರ ಇಲ್ಲಿ ತಿಳಿಸಿದರು.

‘ಪಕ್ಷ ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸುವ ಹಾಗೆ ಕೆಲಸ ಮಾಡಬೇಕಿದ್ದು, ಕುಟುಂಬದ ಸದಸ್ಯರನ್ನು ಅಧಿಕಾರದಿಂದ ದೂರ ಇಡಿ ಎನ್ನುವ ಸಲಹೆ ನೀಡಿದ್ದಾರೆ. ಇದು ನನ್ನನ್ನು ಮಾತ್ರ ಉದ್ದೇಶಿಸಿ ಹೇಳಿಲ್ಲ.

ಎಲ್ಲರಿಗೂ ಅನ್ವಯವಾಗುವಂತೆ ಹೇಳಿದ್ದಾರೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಪಕ್ಷದ ಅಧ್ಯಕ್ಷರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸುವುದಾಗಿ ಹೇಳಿದ ಅವರು, ‘ನನ್ನ ಪುತ್ರ ಗ್ರಂಥಾಲಯ ಇಲಾಖೆಗೆ ಹೋಗಿದ್ದು, ನಿವೃತ್ತಿಯಾಗುತ್ತಿದ್ದ ಅಧಿಕಾರಿಯನ್ನು ಅಭಿನಂದಿಸಲು; ಹಸ್ತಕ್ಷೇಪ ಮಾಡಲು ಹೋಗಿಲ್ಲ. ಒಂದು ವೇಳೆ ಆ ರೀತಿ ಮಾಡಿದ್ದರೂ ಅದು ತಪ್ಪು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.