ADVERTISEMENT

ಇಂದಿನಿಂದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST
ಇಂದಿನಿಂದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ
ಇಂದಿನಿಂದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ   

ಬೆಳಗಾವಿ: ನಗರದ ನಾನಾವಾಡಿ ಬಳಿ ಮೈದಾನವು ಭಾನುವಾರ ಆರಂಭಗೊಳ್ಳಲಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಜ್ಜುಗೊಂಡಿದೆ. ವೀಕ್ಷಣೆಗಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ.

ಇಂಗ್ಲೆಂಡ್, ಅಮೆರಿಕ, ಟರ್ಕಿ, ಡೆನ್ಮಾರ್ಕ್‌ನಿಂದ ಸೇರಿದಂತೆ 22 ವಿದೇಶಿ ತಂಡಗಳು ಹಾಗೂ ಅಹ್ಮದಾಬಾದ್, ಮೈಸೂರು, ಜೋಧಪುರ, ತಮಿಳುನಾಡು, ಬೆಳಗಾವಿಯಿಂದ ಸೇರಿದಂತೆ ದೇಶದ 25 ತಂಡಗಳು ಉತ್ಸವದಲ್ಲಿ ಭಾಗವಹಿಸಲಿವೆ.

ಪರಿವರ್ತನ ಪರಿವಾರ ವತಿಯಿಂದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ 15 ಮತ್ತು 16 ರಂದು ನಡೆಯಲಿರುವ ಉತ್ಸವ ವೀಕ್ಷಣೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ.

ಉತ್ಸವದಲ್ಲಿ ದಾವಣಗೆರೆ ದೋಸಾ, ಸವಣೂರು ಖಾರ, ಕೊರ್ತಿ ಕೊಲ್ಲಾರದ ಮೊಸರವಲಕ್ಕಿ, ಗುಳೇದಗುಡ್ಡದ ಎಣ್ಣೆ ಬದನೇಕಾಯಿ, ಕೊಲ್ಲಾಪುರದ ಪಡತರ ಮಿಸಳ, ಗೋಕಾಕಿನ ಕರದಂಟು ಸೇರಿದಂತೆ ಹಲವು ಬಗೆಯ ತಿನಿಸುಗಳ ಮಳಿಗೆಯನ್ನು ಹಾಕಲಾಗುವುದು ಎಂದು ಅಭಯ ಪಾಟೀಲ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.