ADVERTISEMENT

ಈಜಲು ಹೋಗಿ ನದಿ ಪಾಲು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ಹರಪನಹಳ್ಳಿ (ದಾವಣಗೆರೆ ಜಿಲ್ಲೆ): ದೇವರ ದರ್ಶನಕ್ಕೆ ಆಗಮಿಸಿದ್ದ ಒಂದೇ ಕುಟುಂಬದ ಮೂವರು ಸಹೋ­ದರರು ತುಂಗಭದ್ರಾ ನದಿ­ಯಲ್ಲಿ ಈಜಲು ಹೋಗಿ ನೀರು­ಪಾಲಾದ ದುರ್ಘಟನೆ ತಾಲ್ಲೂಕಿನ ನಂದ್ಯಾಲ ಗ್ರಾಮದ ಸಮೀಪ ಭಾನು­ವಾರ ನಡೆದಿದೆ.

ದಾವಣಗೆರೆ ಮುಸ್ತಫಾ ನಗರದ ನಿವಾಸಿ ರಿಯಾ­ಜ್‌ ಅಹಮದ್ ಅವರ ಪುತ್ರರಾದ ಸಲ್ಮಾನ್‌ (20), ಸುಲ್ತಾನ್‌ (19) ಹಾಗೂ ಮಸ್ತಾನ್‌ (18) ನದಿ ಪಾಲಾದವರು. ತಾಲ್ಲೂಕಿನ ಕುಂಚೂರು ಗ್ರಾಮದ ಅಲ್ಲಾಸ್ವಾಮಿ ದೇವರ ದರ್ಶನಕ್ಕೆ ರಿಯಾಜ್‌ ಅಹಮದ್‌ ಕುಟುಂಬ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.