ADVERTISEMENT

ಈ ಅಭ್ಯರ್ಥಿ ಸೈಕಲ್‌ ಒಡೆಯ!

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ವಿಜಾಪುರ: ಇಲ್ಲಿಯ ಮೀಸಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿರುವ ಬಸವನ ಬಾಗೇವಾಡಿಯ ಸಿದ್ದಪ್ಪ ಗಂಜಿ ಒಂದು ಸೈಕಲ್ ಒಡೆಯ! ತಮ್ಮ ಬಳಿ ₨20,000 ನಗದು ಹಾಗೂ ₨25,000 ಬ್ಯಾಂಕ್‌ ಠೇವಣಿ, ಪತ್ನಿ ಬಳಿ ಎರಡು ತೊಲ ಬಂಗಾರ ಇದೆ.

ಆದರೆ ಸ್ಥಿರಾಸ್ಥಿ ಮತ್ತು ಸಾಲ ಇಲ್ಲ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ವಾಹನದ ಕಾಲಂನಲ್ಲಿ ತಮ್ಮ ಬಳಿ ಸೈಕಲ್‌ ಇದೆ ಎಂದು ಭರ್ತಿ ಮಾಡಿದ್ದು, ಅದರ ಮೌಲ್ಯ ಉಲ್ಲೇಖಿಸಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT