ADVERTISEMENT

ಉಚಿತ ವಸತಿ ಶಾಲೆಗೆ ಪ್ರವೇಶ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ಬೆಂಗಳೂರು: ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ ನಡೆಸುತ್ತಿರುವ ವೀರಭದ್ರಸ್ವಾಮಿ ಉಚಿತ ವಸತಿ ಶಾಲೆಗೆ ಏಪ್ರಿಲ್‌ 7 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.

6ನೇ ತರಗತಿಯಿಂದ 10ನೇ ತರಗತಿಯವರೆಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಲು ಇಚ್ಛಿಸುವ ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಬಹುದು. ವಸತಿ ಶಾಲೆಗೆ ಸುಸಜ್ಜಿತವಾದ ಕಟ್ಟಡವಿದ್ದು ಕಂಪ್ಯೂಟರ್‌, ಯೋಗ, ಸಂಗೀತ ಹಾಗೂ ಕ್ರೀಡೆ  ಶಿಕ್ಷಣವನ್ನು ನೀಡಲಿದೆ. ಪರೀಕ್ಷೆಯು ಮಠದ ಆವರಣದಲ್ಲಿಯೇ ಮಧ್ಯಾಹ್ನ 12 ಗಂಟೆಗೆ  ನಡೆಯಲಿದೆ.

ವಿದ್ಯಾರ್ಥಿಗಳು ಈಚಿನ ಭಾವಚಿತ್ರದೊಂದಿಗೆ ನೇರವಾಗಿ ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ವಿವರಗಳಿಗೆ ಸಂಪರ್ಕಿಸಿ–  ವೀರಭದ್ರಸ್ವಾಮಿ ಉಚಿತ ವಸತಿ ಶಾಲೆ, ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ, ಮಾರತ್‌ಹಳ್ಳಿ ಅಂಚೆ, ಬೆಂಗಳೂರು –560037. ದೂ: ೦೮೦-೨೫೨೩ ೭೨೩೪, ೯೬೧೧೦ ೩೩೪೨೮.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.