ADVERTISEMENT

ಉಪಚುನಾವಣೆ: ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ವಾಪಸು ಪಡೆಯಲು ಕೊನೆಯ ದಿನವಾದ ಸೋಮವಾರ ಐದು ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ.

ಇದರಿಂದಾಗಿ ಉಪಚುನಾವಣೆಯ ಅಂತಿಮ ಕಣದಲ್ಲಿ ಒಟ್ಟು 14 ಜನ ಅಭ್ಯರ್ಥಿಗಳು ಉಳಿದಂತಾಗಿದೆ.
ಬಿಜೆಪಿಯ ಸಂಗಣ್ಣ ಕರಡಿ, ಕಾಂಗ್ರೆಸ್‌ನ ಕೆ.ಬಸವರಾಜ ಹಿಟ್ನಾಳ್, ಜೆಡಿಎಸ್‌ನ ಪ್ರದೀಪಗೌಡ ಮಾಲಿಪಾಟೀಲ, ಪಕ್ಷೇತರರಾದ ನಿರ್ಮಲ ಮಲ್ಲಿಕಾರ್ಜುನ ಹಡಪದ, ಸಣ್ಣ ಮೌಲಾಸಾಬ್, ಬಸಪ್ಪ ಶಂಕರಪ್ಪ, ವಿಠ್ಠಪ್ಪ ಗೋರಂಟ್ಲಿ, ಎಚ್.ಎಂ. ಎಹೆಸಾನುಲ್ಲ ಪಟೇಲ್, ಯಮನೂರಪ್ಪ ಮರಿಯಪ್ಪ, ಸಂಗಮೇಶ್ ಹಿರೇಮಠ, ಮನ್ಸೂರ್ ಬಾಷಾ, ಮೌನೇಶ್ ಶಂಕರಪ್ಪ, ರಾಮುಲು  ವಾಸುದೇವ್, ಆರ್‌ಪಿಐನ ಶರಣಗೌಡ ನೀಲನಗೌಡ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.