ADVERTISEMENT

ಎಂಜಿನಿಯರಿಂಗ್ ಸೇರಲು ನಿಯಮ ಅಡ್ಡಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST
ಎಂಜಿನಿಯರಿಂಗ್ ಸೇರಲು ನಿಯಮ ಅಡ್ಡಿ
ಎಂಜಿನಿಯರಿಂಗ್ ಸೇರಲು ನಿಯಮ ಅಡ್ಡಿ   

ಮಲೇಬೆನ್ನೂರು: ಇಲ್ಲಿನ ಆಶ್ರಯ ಕಾಲೊನಿಯ ಬಡ      ವಿದ್ಯಾರ್ಥಿನಿ ಶಮಾಹಿಲ್, ಸರ್ಕಾರಿ    ಎಂಜಿನಿಯರಿಂಗ್ ಸೀಟು ಗಿಟ್ಟಿಸಿದರೂ ಕಾನೂನು ತೊಡಕಿನಿಂದ ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಆಕೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 80 ಅಂಕ ಪಡೆದು ಸಿಇಟಿ ಪರೀಕ್ಷೆಯಲ್ಲಿ 29,500ನೇ ರ್‍ಯಾಂಕ್ ಗಳಿಸಿದ್ದಾರೆ. ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಸೀಟು ಸಿಕ್ಕಿದೆ.

ಎಂಜಿನಿಯರಿಂಗ್ ಪ್ರವೇಶ ಪಡೆಯುವಾಗ ಕನಿಷ್ಠ 7 ವರ್ಷ ಸತತವಾಗಿ ಶಾಲೆಯಲ್ಲಿ ಅಭ್ಯಾಸ ಮಾಡಿರುವ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ನಿಯಮವಿದೆ. ಆದರೆ ಈಕೆ 7ನೇ ತರಗತಿಗೆ ನೇರ ಪ್ರವೇಶ ಪಡೆದು ವಿದ್ಯಾಭ್ಯಾಸ ಮಾಡಿದ ಕಾರಣ 6 ವರ್ಷ ಓದಿದ ದಾಖಲೆಯಷ್ಟೇ ಇದೆ.

ಹೀಗಾಗಿ ನಿಯಮ ಅಡ್ಡಿಯಾಗಿ ಪ್ರಮಾಣಪತ್ರ ಸಲ್ಲಿಸಲು ಸಾಧ್ಯವಾಗದೆ ಪ್ರವೇಶ ಪಡೆಯಲು ತೊಡಕಾಗಿದ್ದು, ತಾಂತ್ರಿಕ ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.