ADVERTISEMENT

ಎಚ್ಚೆತ್ತುಕೊಂಡ ಕೆಎಸ್‌ಆರ್‌ಟಿಸಿ

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಬೆಂಗಳೂರು: ತನ್ನ ವೆಬ್‌ಸೈಟ್‌ನಲ್ಲಿ ಉಳಿದುಕೊಂಡಿದ್ದ ತಪ್ಪು ಮಾಹಿತಿಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಈಗ ಸರಿಪಡಿಸಿದೆ. ಅಲ್ಲದೆ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳ ಸಂಪರ್ಕ ಸಂಖ್ಯೆಗಳನ್ನೂ ವೆಬ್‌ಸೈಟ್‌ನಲ್ಲಿ ನೀಡಿದೆ.

   ಸಂಸ್ಥೆಯ ಅಧ್ಯಕ್ಷರು, ಎಂ ಡಿ ಮತ್ತು ನಿರ್ದೇಶಕರು ಬದಲಾಗಿದ್ದರೂ ನಿಗಮದ ಕನ್ನಡ ವೆಬ್‌ಸೈಟ್‌ನಲ್ಲಿ  ಹಳೆಯ ಮಾಹಿತಿಯೇ ಇರುವ ಬಗ್ಗೆ ಪ್ರಜಾವಾಣಿಯ ಮಂಗಳವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ಬಗ್ಗೆ ನಿಗಮದ ಮಾರುಕಟ್ಟೆ ಮತ್ತು ಪ್ರಯಾಣಿಕರ ಸಂಪರ್ಕ ವಿಭಾಗದ ಮುಖ್ಯ ವ್ಯವಸ್ಥಾಪಕರು ಸ್ಪಷ್ಟನೆ ನೀಡಿ, `ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮ ತನ್ನ ಇಂಗ್ಲಿಷ್ ವೆಬ್‌ಸೈಟನ್ನು ಮೇಲ್ದರ್ಜೆಗೆ ಏರಿಸಿದೆ.

ಕನ್ನಡದಲ್ಲಿಯೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿ ಇದ್ದ ಕಾರಣ, ಕೆಲ ಮಾಹಿತಿಗಳು ಸರಿಯಾಗಿ ನಮೂದಾಗಿರಲಿಲ್ಲ. ಈಗ ಅವನ್ನು ಸರಿಪಡಿಸಲಾಗಿದೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.