ADVERTISEMENT

ಎಚ್‌ಡಿಕೆ ಭೇಟಿಯಾದ ನಟ ಶಿವರಾಜ್‌ ಕುಮಾರ್‌

ಸಾಕಷ್ಟು ದಿನ ವಿಶ್ರಾಂತಿ ಪಡೆಯುವಂತೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 9:44 IST
Last Updated 12 ಅಕ್ಟೋಬರ್ 2017, 9:44 IST
ಎಚ್‌ಡಿಕೆ ಭೇಟಿಯಾದ ನಟ ಶಿವರಾಜ್‌ ಕುಮಾರ್‌
ಎಚ್‌ಡಿಕೆ ಭೇಟಿಯಾದ ನಟ ಶಿವರಾಜ್‌ ಕುಮಾರ್‌   

ಬೆಂಗಳೂರು: ನಟ ಶಿವರಾಜ್ ಕುಮಾರ್ ಗುರುವಾರ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಎಚ್‌.ಡಿ.ಕುಮಾರಸ್ವಾಮಿ ಅವರ ಜೆ.ಪಿ ನಗರ ನಿವಾಸಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಅರ್ಧಗಂಟೆ ಮಾತುಕತೆ ನಡೆಸಿ, ಸಾಕಷ್ಟು ದಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದರು. ಸೊರಬ ಶಾಸಕ ಮಧು ಬಂಗಾರಪ್ಪ ಜತೆಯಲ್ಲಿದ್ದರು.

ಕಳೆದ ತಿಂಗಳು ನಾಲ್ಕು ಗಂಟೆಗಳ ತೆರೆದ ಹೃದಯದ ಶಸ್ತ್ರಚಿಕಿತ್ಸೆ ನಡೆಸಿ ಎಚ್‌ಡಿಕೆ ಅವರ ಹೃದಯ ಕವಾಟವನ್ನು ಬದಲಾಯಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.