ಎಚ್.ಡಿ.ಕೋಟೆ: ಪಟ್ಟಣದಿಂದ ಉತ್ತರ ಭಾರತಕ್ಕೆ ಯಾತ್ರೆಗೆ ತೆರಳಿದ್ದ ಸುಮಾರು 38 ಮಂದಿಯ ಸುರಕ್ಷತೆ ಬಗ್ಗೆ ಆತಂಕಗೊಂಡಿದ್ದ ಕುಟುಂಬದವರು ಅವರೆಲ್ಲ ಸುರಕ್ಷಿತವಾಗಿರುವುದನ್ನು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.
ಮಳೆ ಹಾಗೂ ಪ್ರವಾಹದಿಂದ ಉತ್ತರಾಖಂಡದಲ್ಲಿ ನೂರಾರು ಜನ ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆ ಕುಟುಂಬದವರು ಭಯಗೊಂಡಿದ್ದರು. ಪಟ್ಟಣದ ಬ್ರಾಹ್ಮಣರ ಬೀದಿಯಿಂದ ವೆಂಕಟಗಿರಿಯಪ್ಪ, ವೆಂಕಟತಿಮ್ಮಪ್ಪ, ಶ್ರೀನಿವಾಸ್, ಶ್ರೀಕಂಠು, ಭುಜಂಗರಾವ್, ನಂದಕುಮಾರ್, ನಾಗೇಶ್ವರ ರಾವ್, ಹೇಮಲತಾ ಪುರುಷೋತ್ತಮ್ ಮತ್ತು ಅವರ ಕುಟುಂಬ ವಾರದ ಹಿಂದೆ ಪ್ರವಾಸಕ್ಕೆ ತೆರಳಿದ್ದರು. ರಕ್ಷಣಾ ಪಡೆಯವರು ತಮ್ಮನ್ನು ಸುರಕ್ಷಿತವಾಗಿ ಹರಿದ್ವಾರಕ್ಕೆ ಕರೆತಂದಿರುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.