ADVERTISEMENT

ಎಲ್ಲ ಜಾತಿಯವರ ಭೇಟಿ ತಾಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಬೀದರ್:  ಗಣೇಶ್ವರ ಅವಧೂತರ ಮಠದ ರೂವಾರಿ ಗಣೇಶ್ವರ ಸ್ವಾಮೀಜಿ ಅವರು ಜಾತಿಯಿಂದ ಲಿಂಗಾಯಿತರು. ಮಾತೃ ಭಾಷೆ ಮರಾಠಿ. ಲಿಂಗಾಯತ ಮಠ ಎಂದೇ ಭಕ್ತರು ಗುರುತಿಸಿದ್ದರೂ ಎಲ್ಲ ಜಾತಿಯ ಜನರೂ ಬರುತ್ತಿದ್ದರು.

ಮಠದ ಆವರಣದಲ್ಲಿ ಅಸಂಖ್ಯ ಸ್ಥಾವರ ಲಿಂಗಗಳು ಮತ್ತು ಬ್ರಹ್ಮ, ವಿಷ್ಣುವಿನ ಪ್ರತಿಮೆ ಇವೆ. ಅರ್ಧನಾರೀಶ್ವರನ ನಿಂತ ಭಂಗಿಯ ಪ್ರತಿಮೆಯೂ ಇದೆ. ಮಠ ತನ್ನದೇ ಆದ ಪೂಜಾ ವಿಧಾನ ಹೊಂದಿತ್ತು.

`ಗಣೇಶ್ವರ ಅವಧೂತ ಸ್ವಾಮೀಜಿ ಅವರೇ ಭಗವಂತನ ಅವತಾರ' ಎಂದು ಸಾಧಕರು ಭಾವಿಸಿದ್ದು ಮಠದಲ್ಲಿ ಅವರೇ ಪೂಜೆಗೆ ಭಾಜನರಾಗುತ್ತಿದ್ದರು. ವಿಶೇಷವೆಂದರೆ, ಸ್ವಾಮೀಜಿ ವಾಸಿಸುತ್ತಿದ್ದ ಗರ್ಭಗುಡಿಯಲ್ಲಿಯೂ, ಹೆಡೆಬಿಚ್ಚಿದ ಪಂಚಸರ್ಪಗಳ ಕೆಳಗೆ ಸ್ವಾಮೀಜಿ ಕುಳಿತಿರುವ ಚಿತ್ರವೇ ಇದೆ.

ಒಂದು ಮೂಲದ ಪ್ರಕಾರ, ಸ್ವಾಮೀಜಿ ಮೂಲ ಹೆಸರು ಶಿವಕುಮಾರ. ಗೃಹಸ್ಥಾಶ್ರಮ ತ್ಯಜಿಸಿದ ಬಳಿಕ ಗಣೇಶ್ವರ ಆದರು. ಅವರು ಗಣೇಶನ ಚೌತಿ ದಿನ ಜನ್ಮ ತಳೆದಿದ್ದುದು ಇದಕ್ಕೆ ಕಾರಣ. ಮಠದ ಪ್ರವೇಶದ ಬಳಿಕ ಗಣೇಶ್ವರ ಅವಧೂತ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.