ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ: 624 ಅಂಕ ಗಳಿಸಿದ ಉಡುಪಿಯ ಮೇಧಾ

​ಪ್ರಜಾವಾಣಿ ವಾರ್ತೆ
Published 7 ಮೇ 2018, 12:15 IST
Last Updated 7 ಮೇ 2018, 12:15 IST
ಮೇಧಾ ಅವರಿಗೆ ಸಿಹಿ ತಿನ್ನಿಸಿದ ತಾಯಿ ಶಶಿಕಲಾ ಭಟ್. ತಂದೆ ಡಾ. ನರಸಿಂಹ ಭಟ್ ಇದ್ದಾರೆ. ಪ್ರಜಾವಾಣಿ ಚಿತ್ರ
ಮೇಧಾ ಅವರಿಗೆ ಸಿಹಿ ತಿನ್ನಿಸಿದ ತಾಯಿ ಶಶಿಕಲಾ ಭಟ್. ತಂದೆ ಡಾ. ನರಸಿಂಹ ಭಟ್ ಇದ್ದಾರೆ. ಪ್ರಜಾವಾಣಿ ಚಿತ್ರ   

ಉಡುಪಿ: ಇಲ್ಲಿನ ಟಿ.ಎ.ಪೈ ಇಎಎಂಎಚ್ ಶಾಲೆಯ ವಿದ್ಯಾರ್ಥಿನಿ ಮೇಧಾ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಮನೆ ಪಾಠಕ್ಕೆ ಹೋಗದೆ ಸ್ವಂತವಾಗಿ ಓದಿ ಅತ್ಯಧಿಕ ಅಂಕ ಗಳಿಸುವ ಮೂಲಕ ಮಾದರಿಯಾಗಿದ್ದಾರೆ.

‘ಶಾಲೆ ಇರಲಿ, ಇಲ್ಲದಿರಲಿ ಪ್ರತಿ ದಿನ ನಾಲ್ಕು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಶಿಕ್ಷಕರು ಏನೇ ಹೋಂ ವರ್ಕ್ ನೀಡಿದರೂ ಅದನ್ನು ಆಯಾ ದಿನವೇ ಮಾಡಿ ಮುಗಿಸುತ್ತಿದ್ದೆ. ನಿರೀಕ್ಷೆಯಂತೆಯೇ ಒಳ್ಳೆಯ ಅಂಕಗಳು ಬಂದಿವೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುತ್ತೇನೆ. ಇಂಗ್ಲಿಷ್ ಸಾಹಿತ್ಯದಲ್ಲಿ ಆಸಕ್ತಿ ಇದ್ದು, ಮುಂದೆ ಆ ವಿಷಯದಲ್ಲಿ ವ್ಯಾಸಂಗ ಮಾಡುವ ಇಚ್ಛೆ ಇದೆ’ ಎಂದು ಮೇಧಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮೇಧಾ ತಂದೆ ಡಾ. ನರಸಿಂಹ ಭಟ್ ತಮ್ಮದೇ ಆದ ಮಣಿಪಾಲ ಡಾಟ್‌ನೆಟ್‌ ಕಂಪನಿ ನಡೆಸುತ್ತಿದ್ದಾರೆ. ತಾಯಿ ಶಶಿಕಲಾ ಭಟ್ ಗೃಹಿಣಿಯಾಗಿದ್ದು, ಕುಟುಂಬ ಮಣಿಪಾಲದಲ್ಲಿ ನೆಲೆಸಿದೆ.

ADVERTISEMENT

[Related]

‘ಮಗಳ ಸಾಧನೆ ಖುಷಿ ತಂದಿದೆ. ಶಾಲೆ ನೀಡಿದ ಪ್ರೋತ್ಸಾಹದಿಂದಲೇ ಇದು ಸಾಧ್ಯವಾಗಿದೆ. ಮಗಳ ಪ್ರತಿಭೆಯನ್ನು ಶಿಕ್ಷಕರು ಪ್ರತಿ ಹಂತದಲ್ಲಿಯೂ ಪ್ರೋತ್ಸಾಹಿಸಿ ಬೆನ್ನುತಟ್ಟಿದ್ದಾರೆ. ಮಾಡುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುವುದು ಮಗಳ ಒಳ್ಳೆಯ ಗುಣ’ ಎಂದು ಶಶಿಕಲಾ ಭಟ್ ಹೇಳಿದರು.

‘ನನ್ನ ಪತಿ ಸಹ ರ‍್ಯಾಂಕ್ ಪಡೆದ ವಿದ್ಯಾರ್ಥಿ. ಅದು ಸಹ ಮೇಧಾಳಿಗೆ ಸ್ಫೂರ್ತಿಯಾಗಿತ್ತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.