ADVERTISEMENT

ಐದು ಕಾಲಿನ ಕರು ಜನನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:50 IST
Last Updated 8 ಏಪ್ರಿಲ್ 2013, 19:50 IST

ಸಂತೇಬೆನ್ನೂರು: ಇಲ್ಲಿಗೆ ಸಮೀಪದ ಕೋಗಲೂರಿನ ರೈತರೊಬ್ಬರ ಮನೆಯಲ್ಲಿ ಸೋಮವಾರ ಹಸು ಐದು ಕಾಲಿನ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.

ಕರುವಿನ ಬೆನ್ನಹುರಿಯ ಮಧ್ಯ ಭಾಗದಲ್ಲಿ ಐದನೇ ಕಾಲು ಕಾಣಿಸಿಕೊಂಡಿದೆ. ಗೊರಸು ಮಾತ್ರ ಸಧೃಡವಾಗಿದೆ, ಆದರೆ, ತೊಡೆ ಭಾಗದ ಮಾಂಸ ಖಂಡಗಳ ದೌರ್ಬಲ್ಯದಿಂದ ಕಾಲು ದೇಹದ ಒಂದು ಮಗ್ಗುಲಿಗೆ ಒರಗಿಕೊಂಡಿದೆ.

ಕರು ಆರೋಗ್ಯದಿಂದಿದೆ. ಬೆಳವಣಿಗೆ ಹೊಂದುವ ಲಕ್ಷಣಗಳಿವೆ ಎನ್ನುತ್ತಾರೆ ಗ್ರಾಮದ ಎಂ.ಆರ್. ರಾಜಶೇಖರ್.

`ಬೆನ್ನಹುರಿಯ ಮೇಲೆ ಐದನೇ ಕಾಲು ಇದ್ದು ಅದನ್ನು ಆಪರೇಷ ಮೂಲಕ ತೆಗೆದಲ್ಲಿ ಮುಖ್ಯ ನರಗಳಗೆ ಹಾನಿ ಸಂಭವಿಸಿ ಕರು ಸಾಯಬಹುದು. ಕರು ಈಗಿರುವ ಸ್ಥಿತಿಯಲ್ಲಿಯೇ ಬೆಳೆಯಲಿ. ಸಮಸ್ಯೆಯಾಗದು. ಎನ್ನುತ್ತಾರೆ' ಹಿರೇ ಕೋಗಲೂರಿನ ಪಶು ವೈದ್ಯಾಧಿಕಾರಿ ಗಿರೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.