ADVERTISEMENT

ಐರೋಡಿ ರಾಮ ಗಾಣಿಗ ನಿಧನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2016, 19:46 IST
Last Updated 21 ಅಕ್ಟೋಬರ್ 2016, 19:46 IST
ಐರೋಡಿ ರಾಮ ಗಾಣಿಗ ನಿಧನ
ಐರೋಡಿ ರಾಮ ಗಾಣಿಗ ನಿಧನ   

ಕುಂದಾಪುರ: ಹಿರಿಯ ಯಕ್ಷಗಾನ ಭಾಗವತ ಐರೋಡಿ ರಾಮ ಗಾಣಿಗ (95) ಅಲ್ಪಕಾಲದ ಅಸೌಖ್ಯದಿಂದಾಗಿ ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ.

ಸಾಹಿತಿ ಡಾ.ಶಿವರಾಮ ಕಾರಂತರೊಂದಿಗೆ 15 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನದ ಕ್ಷೇತ್ರದಲ್ಲಿ ಅವರು ದುಡಿದಿದ್ದರು.

ಕಾರಂತರೊಂದಿಗಿನ ಅವರ ಒಡನಾಟ ಪಾರಂಪರಿಕ ಯಕ್ಷಗಾನ ಕ್ಷೇತ್ರದಲ್ಲಿನ ಹಲವು ಆವಿಷ್ಕಾರಗಳಿಗೆ ಕಾರಣವಾಗಿತ್ತು.

ಗೊಂಬೆಯಾಟದಲ್ಲಿಯೂ ನಿಪುಣರಾಗಿದ್ದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ.

ಶುಕ್ರವಾರ ಕುಂಭಾಸಿಯ ಅವರ ನಿವಾಸದಲ್ಲಿ ಅಂತಿಮ ವಿಧಿ- ವಿಧಾನಗಳು ನಡೆದ ಬಳಿಕ  ಅಂತ್ಯಸಂಸ್ಕಾರ ವನ್ನು ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.