ಬೆಂಗಳೂರು: ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಮುಖ್ಯ ಎಂಜಿನಿಯರ್ ಸಿ.ಮೃತ್ಯುಂಜಯಸ್ವಾಮಿ ಸೇರಿದಂತೆ ಹುದ್ದೆ ನಿರೀಕ್ಷೆಯಲ್ಲಿದ್ದ ಐದು ಜನ ಮುಖ್ಯ ಎಂಜಿನಿಯರ್‌ಗಳಿಗೆ ಸ್ಥಳ ನಿಯುಕ್ತಿ ಮಾಡಲಾಗಿದ್ದು, ಇಬ್ಬರು ಮುಖ್ಯ ಎಂಜಿನಿಯರ್‌ಗಳನ್ನು ವರ್ಗಾಯಿಸಲಾಗಿದೆ.
ಮೃತ್ಯುಂಜಯಸ್ವಾಮಿ- ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ನಿರ್ಮಾಣ ನಿಗಮ, ಬೆಂಗಳೂರು. ಸಿ.ವಿ.ಪಾಟೀಲ- ಮುಖ್ಯ ಎಂಜಿನಿಯರ್, ಪೊಲೀಸ್ ವಸತಿ ನಿಗಮ, ಬೆಂಗಳೂರು. ಮಲ್ಲಿಕಾರ್ಜುನ ಗುಂಗೆ- ಮುಖ್ಯ ಎಂಜಿನಿಯರ್, ತುಂಗಭದ್ರಾ ಯೋಜನಾ ವಲಯ, ಮುನಿರಾಬಾದ್. ಬಿ.ಗುರುಪ್ರಸಾದ್- ಆಡಳಿತಾಧಿಕಾರಿ, ಕಾಡಾ, ಗುಲ್ಬರ್ಗ. ಎಸ್.ನಟರಾಜ್- ಮುಖ್ಯ ಎಂಜಿನಿಯರ್, ಬಾಗಲಕೋಟೆ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಪ್ರಾಧಿಕಾರ. ಜಗನ್ನಾಥ ಪಾಟೀಲ- ಮುಖ್ಯ ಎಂಜಿನಿಯರ್, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ, ಬೆಂಗಳೂರು. ಪಿ.ಅನಂತರಾಮ್- ಮುಖ್ಯ ಎಂಜಿನಿಯರ್, ಕೃಷ್ಣಾ ಭಾಗ್ಯಜಲ ನಿಗಮ, ಆಲಮಟ್ಟಿ.
ಎಸ್‌ಎಫ್‌ಎಸ್: ರಾಜ್ಯ ಅರಣ್ಯ ಸೇವೆಯ ಹಿರಿಯ ಅಧಿಕಾರಿ ಎನ್.ಶಿವರಾಜ್ ಅವರನ್ನು ಕಾವೇರಿ ವನ್ಯಜೀವಿ ವಿಭಾಗದ (ಕೊಳ್ಳೇಗಾಲ) ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.