ADVERTISEMENT

ಐವರು ಸಾಧಕರಿಗೆ ಜಾನಪದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತು ನೀಡುವ `ತಾಯಮ್ಮ ಎಸ್.ಸಿ. ಮಲ್ಲಯ್ಯ  ರಾಜ್ಯ ಮಟ್ಟದ ಜಾನಪದ ಪ್ರಶಸ್ತಿ'ಗೆ ಐದು ಮಂದಿ ಭಾಜನರಾಗಿದ್ದಾರೆ.
ಮಾತೆಂಗವ್ವ ಮಾದಾರ (ವಿಜಾಪುರ ಜಿಲ್ಲೆ, ಬಸವನಬಾಗೇವಾಡಿ), ಐರೋಡಿ ಗೋವಿಂದಪ್ಪ (ಉಡುಪಿ ಜಿಲ್ಲೆ, ಐರೋಡಿ ಗ್ರಾಮ), ಮಾತಾ ಮಂಜವ್ವ ಜೋಗತಿ (ಬಳ್ಳಾರಿ ಜಿಲ್ಲೆ, ಗೊಲ್ಲರಹಳ್ಳಿ), ಶಿವಮ್ಮ (ಚಾಮರಾಜನಗರ ಜಿಲ್ಲೆ, ಮುಳ್ಳೂರು) ಮತ್ತು ರಾಮಲಿಂಗೇಗೌಡ (ಮಂಡ್ಯ ಜಿಲ್ಲೆ, ಮಲ್ಲರಾಜಪುರ) ಅವರೇ ಪುರಸ್ಕೃತರು.

ಪ್ರಶಸ್ತಿ ಪುರಸ್ಕೃತರಿಗೆ ತಲಾ 3 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ. ಡಿ.20 ರಂದು ಮಂಡ್ಯದ ರೈತ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಸಾಹಿತಿ ಪ್ರೊ.ದೇ.ಜವರೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.