ADVERTISEMENT

ಕಥಾ ಸಂಕಲನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2013, 19:59 IST
Last Updated 7 ಮಾರ್ಚ್ 2013, 19:59 IST

ಬೆಂಗಳೂರು: ಮಾಸ್ತಿ ಪ್ರಶಸ್ತಿ ಸಮಿತಿಯು ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ (ಕೋಲಾರ) ಸಹಯೋಗದಲ್ಲಿ 2011 ಮತ್ತು 2012ನೇ ಸಾಲಿನಲ್ಲಿ ಪ್ರಕಟವಾಗಿರುವ ಕಥಾಸಂಕಲನಗಳ ಸ್ಪರ್ಧೆಯನ್ನು ಆಯೋಜಿಸಿದೆ.

ಜೂನ್ ತಿಂಗಳಲ್ಲಿ ಆಯೋಜಿಸುವ `ಮಾಸ್ತಿ ಕಥಾ ಪುರಸ್ಕಾರ' ಸಮಾರಂಭದಲ್ಲಿ ಇಬ್ಬರು ಲೇಖಕರು ಮತ್ತು ಪ್ರಕಾಶಕರಿಗೆ ಮಾಸ್ತಿ ಫಲಕವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ವಿಜೇತರಾಗುವ ಲೇಖಕರಿಗೆ ್ಙ15,000 ಮತ್ತು ಪ್ರಕಾಶಕರಿಗೆ ್ಙ8,000 ನಗದು ಬಹುಮಾನ ದೊರಕಲಿದೆ.

ಕನ್ನಡದ ಮೂಲ ರಚನೆಯ ಪ್ರಕಟಿತ ಕಥಾಸಂಕಲನಗಳನ್ನು ಮಾತ್ರ ಕಳುಹಿಸಬೇಕು ಎಂದು ತಿಳಿಸಿದೆ. ಮಾರ್ಚ್ 30ರ ಒಳಗೆ ಕಥಾಸಂಕಲನಗಳ ಪ್ರತಿಯನ್ನು ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ವಿಳಾಸ: ನಂ.21, ಎಲ್ಲಪ್ಪ ಉದ್ಯಾನ, 10ನೇ ಕ್ರಾಸ್, ಮಲ್ಲೇಶ್ವರ. ಹೆಚ್ಚಿನ ಮಾಹಿತಿಗಾಗಿ: 2336 3347.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.