ADVERTISEMENT

ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಉತ್ತರ ಒಳ ನಾಡಿನಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶ
ಗಳಲ್ಲಿ ಮಳೆಯಾಗಿದೆ.

ಸೈದಾಪುರದಲ್ಲಿ 14 ಸೆಂ.ಮೀ. ಮಳೆಯಾಗಿದೆ. ನಾಲವಾರ 11, ಚಾಮರಾಜನಗರ 9, ಮಂಗಳೂರು ವಿಮಾನ ನಿಲ್ದಾಣ, ಅಥಣಿ, ಶಹಾಪುರ, ನೆಲಮಂಗಲ 7, ರಾಯಚೂರು, ದೇವದುರ್ಗ, ತಿಪ್ಪ ಗೊಂಡನಹಳ್ಳಿ 6, ಬಾಳೆಹೊನ್ನೂರು 5, ರಾಯಬಾಗ, ಹನುಮಸಾಗರ, ವಿಜಾಪುರ, ಕೆಂಭಾವಿ, ಸಿಂಧನೂರು, ಆಗುಂಬೆ, ಹೆಸರಘಟ್ಟ, ದೇವನಹಳ್ಳಿ, ಚಿಕ್ಕಬಳ್ಳಾಪುರ 4, ಮಂಗಳೂರು, ರಾಮದುರ್ಗ, ಧಾರವಾಡ, ಹಾನ ಗಲ್‌, ಜೇವರ್ಗಿ, ಗುಲ್ಬರ್ಗ, ಸೋಮ ವಾರಪೇಟೆ, ಕೋಲಾರ, ಬಳ್ಳಾರಿ 3,

ಬಂಟ್ವಾಳ, ಬೆಳವಾಡಿ, ಬೀದರ್‌,  ಚಿತ್ತಾಪುರ, ಚಿಕ್ಕಮಗಳೂರು, ಕೆ.ಆರ್‌. ನಗರ, ಯಳಂದೂರು, ಶ್ರೀನಿವಾಸ ಪುರ, ಶಿಡ್ಲಘಟ್ಟ 2, ಮೂಡುಬಿದಿರೆ, ಮೂಲ್ಕಿ, ಮಾಣಿ, ಪುತ್ತೂರು, ಹಳಿ ಯಾಳ, ಸಿದ್ದಾಪುರ, ಚಿಕ್ಕೋಡಿ, ಹುಕ್ಕೇರಿ, ಬೆಳಗಾವಿ ವಿಮಾನ ನಿಲ್ದಾಣ, ಹಾವೇರಿ, ಚಿಟಗುಪ್ಪ,  ಸೇಡಂ, ಮಾನ್ವಿ, ಮಡಿಕೇರಿ, ಕುಶಾಲ ನಗರ, ಕೊಟ್ಟಿಗೆಹಾರ, ಹಾಸನ, ಹೊಸ ಕೋಟೆ, ತೊಂಡೆ ಬಾವಿಯಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.