ADVERTISEMENT

'ಕರ್ನಾಟಕದಲ್ಲಿ ಜೆಡಿಎಸ್‍ ಜಯಗಳಿಸಲಿದೆ' ಎಂಬ ಭವಿಷ್ಯ ನುಡಿದು ಅಮೆರಿಕದ ರಾಯಭಾರಿ ಕಚೇರಿ ಹೆಸರಿನಲ್ಲಿ ಹರಿದಾಡುತ್ತಿದೆ ನಕಲಿ ಪತ್ರ!

​ಪ್ರಜಾವಾಣಿ ವಾರ್ತೆ
Published 8 ಮೇ 2018, 7:50 IST
Last Updated 8 ಮೇ 2018, 7:50 IST
'ಕರ್ನಾಟಕದಲ್ಲಿ ಜೆಡಿಎಸ್‍ ಜಯಗಳಿಸಲಿದೆ' ಎಂಬ ಭವಿಷ್ಯ ನುಡಿದು ಅಮೆರಿಕದ ರಾಯಭಾರಿ ಕಚೇರಿ ಹೆಸರಿನಲ್ಲಿ ಹರಿದಾಡುತ್ತಿದೆ ನಕಲಿ ಪತ್ರ!
'ಕರ್ನಾಟಕದಲ್ಲಿ ಜೆಡಿಎಸ್‍ ಜಯಗಳಿಸಲಿದೆ' ಎಂಬ ಭವಿಷ್ಯ ನುಡಿದು ಅಮೆರಿಕದ ರಾಯಭಾರಿ ಕಚೇರಿ ಹೆಸರಿನಲ್ಲಿ ಹರಿದಾಡುತ್ತಿದೆ ನಕಲಿ ಪತ್ರ!   

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಾತ್ಯಾತೀತ ಜನತಾ ದಳ ಅತೀ ಹೆಚ್ಚು ಸೀಟುಗಳನ್ನು ಗಳಿಸಲಿದೆ. ಕಾಂಗ್ರೆಸ್ ಎರಡನೇ ಸ್ಥಾನ ಪಡೆಯಲಿದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ- ಹೀಗೆ ಭವಿಷ್ಯ ನುಡಿದಿರುವ ಅಮೆರಿಕದ ರಾಯಭಾರಿ ಕಚೇರಿಯ ಪತ್ರವೊಂದು ವಾಟ್ಸ್ಆ್ಯಪ್‍ನಲ್ಲಿ ಹರಿದಾಡುತ್ತಿದೆ.

ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯು ರಿಪಬ್ಲಿಕನ್ ಪಕ್ಷದ ಮುಖಂಡ, ರಾಜ್ಯ ಕಾರ್ಯದರ್ಶಿ ಮೈಕ್ ಪಾಂಪೊ ಅವರಿಗೆ ಕಳಿಸಿದ ಪತ್ರವಾಗಿದೆ ಇದು.

(ವಾಟ್ಸ್ಆ್ಯಪ್‍ನಲ್ಲಿ ಹರಿದಾಡುತ್ತಿರುವ ಪತ್ರದ ಪ್ರತಿ)

ADVERTISEMENT

ಪತ್ರದಲ್ಲಿ ಏನಿದೆ?
ಖಾಸಗಿ ಕಂಪನಿಯೊಂದರ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯಲಿದ್ದು, ಕಾಂಗ್ರೆಸ್ ಎರಡನೇ ಸ್ಥಾನದಲ್ಲಿರಲಿದೆ. ಆದರೆ ಯಾವುದೇ ಪಕ್ಷ ಪೂರ್ಣ ಬಹುಮತ ಪಡೆದು ಸರ್ಕಾರ ರಚಿಸುವುದಕ್ಕೆ ಸಾಧ್ಯತೆಗಳಿಲ್ಲ.

224 ಸೀಟುಗಳಿರುವ ಕರ್ನಾಟಕ ವಿಧಾನಸಭೆಯಲ್ಲಿ 223 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಜೆಡಿಎಸ್ 90, ಕಾಂಗ್ರೆಸ್ 70 ಮತ್ತು ಬಿಜೆಪಿ 63 ಸೀಟುಗಳನ್ನು ಗಳಿಸಲಿದೆ. ಅಷ್ಟೇ ಅಲ್ಲದೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರೊಂದಿಗೆ ಉತ್ತಮ ರಾಜಕೀಯ ಸಂಬಂಧ ಇಟ್ಟುಕೊಳ್ಳುವುದು ಒಳ್ಳೆಯದು ಎಂಬ ಸಲಹೆಯನ್ನು ಇಲ್ಲಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.