ADVERTISEMENT

ಕರ್ನಾಟಕ ವಿಧಾನಸಭಾ ಚುನಾವಣೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 9:59 IST
Last Updated 27 ಮಾರ್ಚ್ 2018, 9:59 IST
ಯಡಿಯೂರಪ್ಪ -ಸಿದ್ದರಾಮಯ್ಯ
ಯಡಿಯೂರಪ್ಪ -ಸಿದ್ದರಾಮಯ್ಯ   

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯ....ರಂದು ನಡೆಯಲಿದೆ. ಇಂದು ಬೆಳಗ್ಗೆ ಚುನಾವಣಾ ಆಯೋಗ ನಡೆಸಿದ ಸುದ್ದಿಗೋಷ್ಠಿಯಲ್ಲಿ ದಿನಾಂಕ ಪ್ರಕಟಿಸಲಾಗಿದೆ.
ಈಗಿರುವ 224 ಸದಸ್ಯರ ಕರ್ನಾಟಕ ವಿಧಾನಸಭೆಯ ಕಾಲಾವಧಿ ಮೇ 28ರಂದು ಅಂತ್ಯಗೊಳ್ಳಲಿದೆ. ಮೇ ತಿಂಗಳು ಮುಗಿಯುವುದರೊಳಗೆ ಕರ್ನಾಟಕದಲ್ಲಿ ಚುನಾವಣಾ ಪ್ರಕ್ರಿಯೆಗಳು ಪೂರ್ತಿಗೊಳ್ಳಬೇಕಿದೆ.

ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಯೇರಲು ಬಿಜೆಪಿ ಯತ್ನಿಸುತ್ತಿದೆ. ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದರೆ, ಇತ್ತ ಕಾಂಗ್ರೆಸ್ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಣಕ್ಕಿಳಿದಿದೆ.

ಚೆಂಗನ್ನೂರು ಉಪ ಚುನಾವಣೆಗೆ ದಿನಾಂಕ ನಿಗದಿ
ಕೇರಳದ ಆಲಪ್ಪುಳ ಜಿಲ್ಲೆಯ ಚೆಂಗನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ...ರಂದು ಉಪಚುನಾವಣೆ ನಡೆಯಲಿದೆ. ಸಿಪಿಎಂ ಶಾಸಕರಾಗಿದ್ದ ಕೆ.ಕೆ. ರಾಮಚಂದ್ರನ್ ನಾಯರ್ ಅವರ ನಿಧನದಿಂದ ಇಲ್ಲಿ ಶಾಸಕ ಸ್ಥಾನ ತೆರವಾಗಿತ್ತು. ಕಾಂಗ್ರೆಸ್ ಅಧಿಪತ್ಯವಿದ್ದ ಈ ಕ್ಷೇತ್ರದಲ್ಲಿ ಕಳೆದ ಬಾರಿ ಸಿಪಿಎಂ ಗೆಲುವು ಸಾಧಿಸಿತ್ತು. ಈ ಬಾರಿ ಎಲ್‍ಡಿಎಫ್ ಅಭ್ಯರ್ಥಿ ಸಜಿ ಚೆರಿಯನ್, ಯುಡಿಎಫ್ ಅಭ್ಯರ್ಥಿ ಡಿ. ವಿಜಯಕುಮಾರ್ ಮತ್ತು ಬಿಜೆಪಿ ಅಭ್ಯರ್ಥಿ ಪಿ.ಎಸ್ ಶ್ರೀಧರನ್ ಪಿಳ್ಳ ಕಣದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.