ADVERTISEMENT

ಕರ್ನಾಟಕ ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆ: ಬಿಜೆಪಿಗೆ 89–95 ಸ್ಥಾನ, ಕಾಂಗ್ರೆಸ್‌ಗೆ 85–91 ಸ್ಥಾನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 15:21 IST
Last Updated 23 ಏಪ್ರಿಲ್ 2018, 15:21 IST
ಕರ್ನಾಟಕ ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆ: ಬಿಜೆಪಿಗೆ 89–95 ಸ್ಥಾನ, ಕಾಂಗ್ರೆಸ್‌ಗೆ 85–91 ಸ್ಥಾನ
ಕರ್ನಾಟಕ ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆ: ಬಿಜೆಪಿಗೆ 89–95 ಸ್ಥಾನ, ಕಾಂಗ್ರೆಸ್‌ಗೆ 85–91 ಸ್ಥಾನ   

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಅವಕಾಶ ಹೆಚ್ಚು ಎಂದು ಎಬಿಪಿ ನ್ಯೂಸ್‌–ಲೋಕನೀತಿ–ಜೈನ್‌ ಮತ್ತು ಸೆಂಟರ್‌ ಫಾರ್‌ ದ ಸ್ಟಡಿ ಆಫ್‌ ಡೆವಲಪಿಂಗ್‌ ಸೊಸೈಟೀಸ್‌ (ಸಿಎಸ್‌ಡಿಎಸ್‌) ನಡೆಸಿದ ಸಮೀಕ್ಷೆ ಹೇಳಿದೆ.

89–95 ಸ್ಥಾನ ಪಡೆಯುವ ಮೂಲಕ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆಯುವ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ 85–90 ಸ್ಥಾನ ಗಳಿಸಲಿದ್ದು, 32–38 ಸ್ಥಾನ ಗಳಿಸಲಿರುವ ಜೆಡಿಎಸ್‌ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. 

ಈ ಸಮೀಕ್ಷೆಯಲ್ಲಿ ಶೇ 37ರಷ್ಟು ಮತದಾರರು ಕಾಂಗ್ರೆಸ್‌ ಪರ ಒಲವು ವ್ಯಕ್ತಪಡಿಸಿದ್ದಾರೆ. ಶೇ 35ರಷ್ಟು ಜನರು ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಜೆಡಿಎಸ್‌ ಮೂರನೇ ಸ್ಥಾನದಲ್ಲಿದ್ದು ಶೇ 20 ರಷ್ಟು ಜನರ ಬೆಂಬಲ ಪಡೆದಿದೆ. ಪಕ್ಷೇತರರು ಹಾಗೂ ಇತರೆ ಪಕ್ಷಗಳ ಶೇ 8ರಷ್ಟು ಮತ ಪಡೆಯಬಹುದೆಂದು ಸಮೀಕ್ಷೆ ಹೇಳಿದೆ.

ADVERTISEMENT

ಮುಖ್ಯಮಂತ್ರಿ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಪರವಾಗಿ ಶೇ 30ರಷ್ಟು ಮತದಾರರು ಒಲವು ವ್ಯಕ್ತಪಡಿಸಿದ್ದು, ಪಕ್ಷ ಅಧಿಕಾರಕ್ಕೆ ಬಂದರೇ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂಬುದು ಮತದಾರರ ಅಭಿಪ್ರಾಯವಾಗಿದೆ. ಪ್ರತಿಕ್ರಿಯೆ ನೀಡಿರುವ ಒಟ್ಟು ಮತದಾರರ ಪೈಕಿ ಶೇ 25ರಷ್ಟು ಯಡಿಯೂರಪ್ಪ ಪರ ಹಾಗೂ ಶೇ 20ರಷ್ಟು ಕುಮಾರಸ್ವಾಮಿ ಪರವಾಗಿದ್ದಾರೆ. 

ಸಮೀಕ್ಷೆ ಪ್ರಕಾರ, ಬಿಜೆಪಿ ಅತಿ ಹೆಚ್ಚು ಲಿಂಗಾಯತ ಮತಗಳನ್ನು ಪಡೆದುಕೊಳ್ಳಲಿದೆ. ಶೇ 60ರಷ್ಟು ಲಿಂಗಾಯತ ಮತದಾರರು ಬಿಜೆಪಿಗೆ ಮತ ನೀಡಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.