ADVERTISEMENT

ಕಲುಷಿತ ಮರಳು- ಪರಿಣಾಮಗಳೇನು?

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 20:00 IST
Last Updated 3 ನವೆಂಬರ್ 2018, 20:00 IST
ಮರಳು ಲಾರಿ ಚಾಲಕನೊಬ್ಬ ಪೊಲೀಸ್‌ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾನೆಂದು ಆರೋಪಿಸಿ ಉದ್ರಿಕ್ತ ಗ್ರಾಮಸ್ಥರು ಲಕ್ಷ್ಮೇಶ್ವರ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು (ಸಂಗ್ರಹ ಚಿತ್ರ)
ಮರಳು ಲಾರಿ ಚಾಲಕನೊಬ್ಬ ಪೊಲೀಸ್‌ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾನೆಂದು ಆರೋಪಿಸಿ ಉದ್ರಿಕ್ತ ಗ್ರಾಮಸ್ಥರು ಲಕ್ಷ್ಮೇಶ್ವರ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು (ಸಂಗ್ರಹ ಚಿತ್ರ)   

ಎರಡು ರೀತಿಯ ಮರಳುಗಳನ್ನು (ನದಿಯ ಮರಳು ಹಾಗೂ ಎಂ–ಸ್ಯಾಂಡ್‌) ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತದೆ. ಆದರೆ ಕ್ವಾರಿಯ ದೂಳನ್ನು ಎಂ–ಸ್ಯಾಂಡ್‌ ಎಂದು ನಂಬಿಸುತ್ತಾರೆ. ಇದು ಕಟ್ಟಡ ನಿರ್ಮಾಣಕ್ಕೆ ಸೂಕ್ತ ಅಲ್ಲ.

* ಮರಳು ಅಥವಾ ಎಂ–ಸ್ಯಾಂಡ್‌ ಸಾವಯವ ಪದಾರ್ಥಗಳಂತಹ ಹಾನಿಕಾರಕ ಅಂಶಗಳಿಂದ ಮುಕ್ತವಾಗಿರ
ಬೇಕು. ಇಂತಹ ಕಲುಷಿತ ಮರಳು ಕಟ್ಟಡದ ಅಥವಾಕಾಂಕ್ರೀಟ್‌ನ ಸಾಮರ್ಥ್ಯದ ಮೇಲೆ ದುಷ್ಪರಿ
ಣಾಮ ಬೀರುತ್ತದೆ. ಬಾಳಿಕೆ ಅವಧಿ ಕಡಿಮೆ ಮಾಡುತ್ತದೆ

* ಮರಳಿನಲ್ಲಿ ಆವೆಮಣ್ಣಿನಂಶ ಇರಬಾರದು. ವಾತಾವರಣದ ತೇವಾಂಶವನ್ನು ಹೀರಿಕೊಳ್ಳುವ ಆವೆಮಣ್ಣು ಹಿಗ್ಗುವ ಹಾಗೂ ಕುಗ್ಗುವ ಪ್ರಕ್ರಿಯೆಗೆ ಒಳಗಾಗುತ್ತದೆ. ಈ ಪ್ರಕ್ರಿಯೆಯಿಂದ ಕಾಂಕ್ರೀಟ್‌ ರಚನೆಯಲ್ಲಿ ಸಣ್ಣಪ್ರಮಾಣದ ಬಿರುಕುಗಳು ಉಂಟಾಗುವ ಅಪಾಯವಿದೆ. ಕಾಂಕ್ರೀಟ್‌ನ ಬಾಳಿಕೆ ಮೇಲೆ ಇದು ಕೂಡಾ ಪರಿಣಾಮ ಬೀರುತ್ತದೆ

ADVERTISEMENT

* ಮರಳಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಆವೆಮಣ್ಣಿನ ಅಂಶ ಇದ್ದರೆ ಗಾರೆ ಕೆಲಸಕ್ಕೆ ಸಹಕಾರಿಯಾಗುತ್ತದೆ

* ಕಲುಷಿತ ಮರಳಿನಲ್ಲಿ ಹರಳಿನ ಹಂಚಿಕೆ ಒಂದೇ ಪ್ರಮಾಣದಲ್ಲಿ ಇರುವುದಿಲ್ಲ. ಅವುಗಳಲ್ಲಿ ದೂಳಿನ ಕಣಗಳು, ನೀರಿನಂಶ ಹೆಚ್ಚು ಇರುತ್ತದೆ. ಇದು ಸಿಮೆಂಟ್‌ ಗಟ್ಟಿಗೊಳ್ಳುವ ಪ್ರಕ್ರಿಯೆಗೆ ಹಾನಿ ಉಂಟುಮಾಡುತ್ತವೆ

* ಕಲುಷಿತ ಮರಳಿನಲ್ಲಿ ರಾಸಾಯನಿಕ ಅಂಶಗಳು ಸೇರಿದ್ದರೆ ಅದು ಬಲವರ್ಧನೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.