ADVERTISEMENT

ಕಾಸರಗೋಡು: ದೇವಸ್ಥಾನಕ್ಕೆ:ಕೋಣನ ತಲೆ ಎಸೆತ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಮಂಗಳೂರು: ಕಾಸರಗೋಡಿನ ಹಳೆ ಬಸ್ ನಿಲ್ದಾಣ ಸಮೀಪದ ಮಲ್ಲಿಕಾರ್ಜುನ ದೇವಸ್ಥಾನದತ್ತ ದುಷ್ಕರ್ಮಿಗಳು ಕೋಣನ ತಲೆ ಎಸೆದ ಘಟನೆ ಸೋಮವಾರ ರಾತ್ರಿ ನಡೆದಿದ್ದು, ನಗರದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದೆ.

ಕೋಣನ ತಲೆ ದೇವಸ್ಥಾನದ ಒಳಗೆ ಬಿದ್ದಿಲ್ಲ. ಆದರೂ ಈ ವಿದ್ಯಮಾನ ಜನರನ್ನು ಕೆರಳಿಸಿದ್ದು, ಆಕ್ರೋಶಗೊಂಡ ಸ್ಥಳೀಯರು ಹಲವು ವಾಹನಗಳು ಮತ್ತು ಸುತ್ತಮುತ್ತಲಿನ ಅಂಗಡಿಗಳನ್ನು ಹಾನಿಗೊಳಿಸಿದ್ದಾರೆ.ಕಳೆದ ಶನಿವಾರ ಕಾಸರಗೋಡಿನ ಬಿಜೆಪಿ ಕಚೇರಿ ಮೇಲೆ ದಾಳಿ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.